Saturday, August 13, 2022

Latest Posts

ಎಸ್‌ಪಿಬಿ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ 3 ಕೋಟಿ ರೂ. ಬಿಲ್‌? ಸುದ್ದಿಗೋಷ್ಠಿ ನಡೆಸಿ ಪುತ್ರ ಚರಣ್ ಹೇಳಿದ್ದೇನು?

ಚೆನ್ನೈ: ಸೆಪ್ಟೆಂಬರ್ 25ರಂದು ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಬಗ್ಗೆ ಈಗ ವದಂತಿಗಳು ಹಬ್ಬುತ್ತಿದೆ.
ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್ ಆಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿರುವ ಸಂದೇಶಗಳು, ಎಂಜಿಎಂ ಹೆಲ್ತ್ ಕೇರ್ ಹಾಸ್ಪಿಟಲ್ 3 ಕೋಟಿಗೂ ಹೆಚ್ಚು ಶುಲ್ಕ ವಿಧಿಸಿ, ಅವರ ಶವವನ್ನು 1.85 ಕೋಟಿ ರೂಪಾಯಿ ಬಾಕಿ ಹಣ ಪಾವತಿಸಿದ ನಂತರ ವಷ್ಟೇ ನೀಡಲಾಗಿದೆ ಅಂತ ಕಿಡಿಗೇಡಿಗಳು ನಕಲಿ ಸುದ್ದಿಯನ್ನು ಹರಡುತ್ತಿದ್ದರು.
ಈ ವದಂತಿಗಳು ವ್ಯಾಪಕವಾಗಿ ಹಬ್ಬುತ್ತಿದ್ದಂತೆಯೇ, ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿರುವ ಎಸ್ ಪಿ ಚರಣ್, ‘ತಂದೆಯ ಆಸ್ಪತ್ರೆ ವೆಚ್ಚಗಳು, ಎಂಜಿಎಂ ಆಸ್ಪತ್ರೆ ಹಾಗೂ ಸಹಾಯದ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ, ಈ ರೀತಿಯ ವದಂತಿಗಳಿಂದಾಗಿ ಬಹಳಷ್ಟು ಜನರಿಗೆ ನೋವುಂಟಾಗಲಿದೆ. ಆಸ್ಪತ್ರೆಯ ಸಿಬ್ಬಂದಿಗಳು ನಮಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚಗಳ ಬಗ್ಗೆ ವೈದ್ಯರು ಹಾಗೂ ನಾನು ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ನೀಡುತ್ತೇವೆ ಎಂದು ಚರಣ್ ತಿಳಿಸಿದ್ದಾರೆ.
ಯಾವುದೇ ಬಾಕಿ ಬಿಲ್ ಸ್ವೀಕರಿಸಲು ಆಸ್ಪತ್ರೆ ನಿರಾಕರಣೆ: ಚರಣ್
ವದಂತಿಗಳ ನಂತರ ಎಂಜಿಎಂ ಆಸ್ಪತ್ರೆಯ ವೈದ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪುತ್ರ ಚರಣ್ ಅವರು, ನನ್ನ ತಂದೆಯ ಮರಣದ ನಂತರ, ಇನ್ನು ಎಷ್ಟು ಹಣ ಪಾವತಿಸಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದ್ದೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಬಾಕಿ ಬಿಲ್ ಸ್ವೀಕರಿಸಲು ನಿರಾಕರಿಸಿದರು ಎಂದರು.
ನಾವು ವಾರಕ್ಕೆ ಒಮ್ಮೆ ಆಸ್ಪತ್ರೆಯ ಬಿಲ್ ಅನ್ನು ಪಾವತಿಸುತ್ತಿದ್ದೇವೆ. ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ವಿಮೆಯಿಂದ ಪಡೆದುಕೊಳ್ಳಲಾಗಿದೆ. ನನ್ನ ತಂದೆಯ ಸಾವಿನ ನಂತರ, ನಾವು ಬಾಕಿ ಹಣ ಪಾವತಿ ಬಗ್ಗೆ ಕೇಳಿದ್ದೇವೆ ಮತ್ತು ಹಣದೊಂದಿಗೆ ಪಾವತಿ ಮಾಡಲು ಹೋಗಿದ್ದೆವು. ಆದರೆ ಆಸ್ಪತ್ರೆಯ ಸಿಬ್ಬಂದಿ ನಮ್ಮಿಂದ ಹಣ ತೆಗೆದುಕೊಳ್ಳಬೇಡಿ ಎಂದು ತಮಗೆ ಮ್ಯಾನೇಜ್ಮೆಂಟ್ ಸೂಚಿಸಿರುವುದಾಗಿ ಹೇಳಿದರು ಎಂದರು. ಹರುಡುತ್ತಿದ್ದ ವದಂತಿಗಳಿಗೆ ಈ ಮೂಲಕ ಚರಣ್ ತೆರೆಎಳೆದಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss