ಮಂಡ್ಯ: ಬೆಂಗಳೂರಿನಲ್ಲಿ ಆ.11ರಂದು ನಡೆದ ಗಲಭೆಯಲ್ಲಿ ಎಸ್ಡಿಪಿಐ ಕೈವಾಡವಿರುವುದು ಬಹಿರಂಗವಾಗಿದೆ. ಆದ್ದರಿಂದ, ಈ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ 1 ಲಕ್ಷ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಅಂತೆಯೇ, ಹಿಂದುಗಳ ತಮ್ಮ ರಕ್ಷಣೆಗಾಗಿ ಮನೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕೆಂದು ಎಂದು ಭಜರಂಗಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಕರೆ ನೀಡಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ನಂತರ ಸಹಿ ಸಂಗ್ರಹದ ಜತೆಗೆ ಮಂಡ್ಯದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು. ಅಂತೆಯೇ, ಸಂಘಟನೆಯನ್ನು ನಿಷೇಧಿಸಿದರೆ ಸದಸ್ಯರು ಬೇರೊಂದು ಹೆಸರಿನಲ್ಲಿ ಮತ್ತೆ ಬರುತ್ತಾರೆ. ಆದ್ದರಿಂದ, ಸಂಘಟನೆಯ ಎಲ್ಲ ಸದಸ್ಯರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು. ಹೀಗಾದರೆ ಅವರಿಗೆ ಎರಡು ವರ್ಷ ಜಾಮೀನು ಸಿಗುವುದಿಲ್ಲ ಎಂದು ಆಗ್ರಹಿಸಿದರು.
ಬೆಂಗಳೂರಿನ ಗಲಭೆಗೆ ಸಂಬಂಧಿಸಿದಂತೆ ದೃಶ್ಯ ಸಾಕ್ಷಿಗಳಿವೆ. ಈ ಕೋಮುವಾದಿ ಸಂಘಟನೆಗೆ ಸಂವಿಧಾನದ ಮೇಲೆ ಯಾವುದೇ ಗೌರವವಿಲ್ಲ. ಕಾನೂನಿನ ಭಯವೂ ಇಲ್ಲ. ಇವರು ದೇಶಾದ್ಯಂತ ಕೋಮು ಆಧಾರಿತ ಧಂಗೆ ನಡೆಸಿ ನೂರಾರೂ ಹಿಂದುಗಳ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ ಅವರು, ಬೆಂಗಳೂರಿನ ಘಟನೆ ವೇಳೆ ಆಗಿರುವ ನಷ್ಟವನ್ನು ತಪ್ಪಿತಸ್ಥರಿಂದಲೇ ಭರಿಸಬೇಕು. ಅಂತೆಯೇ, ಇವರಿಗೆ ಸೇರಿದ ಎಲ್ಲ ದಾಖಲಾತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದುಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ತಮ್ಮ ಮನೆಯ ಸದಸ್ಯರು, ಹೆಣ್ಣು ಮಕ್ಕಳು ಹಾಗೂ ಆಸ್ತಿಯ ರಕ್ಷಣೆಗಾಗಿ ಮನೆಗಳಲ್ಲಿ ಶಸಗಳನ್ನು ಇಟ್ಟುಕೊಳ್ಳಬೇಕು. ನಮ್ಮ ಮೇಲೆ ದಾಳಿಯಾದಾಗ ಆತ್ಮರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಗಣೇಶ ಹಬ್ಬ ನಿರ್ಬಂಧ ಸಲ್ಲ :
ಗಣೇಶ ಹಬ್ಬ ಹಿಂದುಗಳ ಪಾಲಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಆದರೆ, ಸರ್ಕಾರ ಕರೊನಾದ ಕಾರಣ ಕೊಟ್ಟು ಹಬ್ಬದ ಆಚರಣೆಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಆದ್ದರಿಂದ, ನಮ್ಮ ಭಾವನೆಗೆ ಬೆಲೆ ಕೊಟ್ಟು ಕೆಲ ಮುನ್ನೆಚ್ಚರಿಕಾ ಕ್ರಮ ಸೂಚಿಸಿ ಹಬ್ಬದ ಆಚರಣೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಗಂಗಾಧರ್ ಸುಂಡಹಳ್ಳಿ, ಉಪಾಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಶಿವು ಕಲ್ಲಹಳ್ಳಿ, ರಾಜ್ಯ ಕಾರ್ಯದರ್ಶಿ ನಾಕಾ ಕೃಷ್ಣ, ಹರ್ಷ, ಚೇತನ್, ಯತೀಶ್ ಇದ್ದರು.