ಹೊಸ ದಿಗಂತ ಆನ್ ಲೈನ್ ಡೆಸ್ಕ್:
26ನೇ ನವೆಂಬರ್ 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಹಲವು ವಿಚಾರಗಳನ್ನುಬಹಿರಂಗಪಡಿಸಿದ್ದು, ದಾಳಿಯಲ್ಲಿ ತನ್ನ ದೇಶದ ೧೧ ಭಯೋತ್ಪಾದಕರ ಉಪಸ್ಥಿತಿಯನ್ನು ಒಪ್ಪಿಕೊಂಡಿದೆ.
ಫೆಡರಲ್ ತನಿಖಾ ಸಂಸ್ಥೆ 800 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು,2008ರ ಮುಂಬೈ ಭಯೋತ್ಪಾದಕ ದಾಳಿಗೆ ಸಹಕರಿಸಲು ದೋಣಿ ಅಲ್ಫೌಜ್ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್ ಮೂಲದ ಮುಹಮದ್ ಅಮ್ಜದ್ ಖಾನ್ನನ್ನು ಗುರುತಿಸಲಾಗಿದೆ.
ಅಮ್ಜದ್ ಇದಕ್ಕೂ ಮೊದಲು ಕರಾಚಿಯಲ್ಲಿ ಮಹಾ ಮೋಟೋ ಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ ಗಳು, ಕರಾಚಿಯ ಎಆರ್ ಝಡ್ ವಾಟರ್ ಸ್ಪೋರ್ಟ್ ನಿಂದ ಗಾಳಿ ತುಂಬಬಹುದಾದ ದೋಣಿಗಳನ್ನು ಖರೀದಿಸಿದ, ನಂತರ ಇದನ್ನು ಭಾರತದ ವಾಣಿಜ್ಯ ನಗರಿಯ ಮೇಲಿನ ದಾಳಿಯಲ್ಲಿ ಬಳಸಲಾಯಿತು. ಅಲ್-ಹುಸೇನಿ ದೋಣಿಯ ಕ್ಯಾಪ್ಟನ್ ಆಗಿದ್ದ ಎಂದು ಸಹ ಉಲ್ಲೇಖಿಸಲಾಗಿದೆ. ಅಲ್-ಹುಸೇನಿ ಎಂಬ ದೋಣಿಯ ಕ್ಯಾಪ್ಟನ್ ಆಗಿದ್ದ ಬಹವಾಲ್ಪುರದ ಶಾಹಿದ್ ಗಫೂರ್ ಮತ್ತು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಗಳನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಹೀವಾಲ್ ಜಿಲ್ಲೆಯ ಮುಹಮ್ಮದ್ ಉಸ್ಮಾನ್, ಲಾಹೋರ್ ಜಿಲ್ಲೆಯ ಅಟೆಕ್-ಉರ್-ರೆಹಮಾನ್, ಹಫೀಜಾಬಾದ್ನ ರಿಯಾಜ್ ಅಹ್ಮದ್, ಗುಜ್ರಾನ್ವಾಲಾ ಜಿಲ್ಲೆಯ ಮುಹಮ್ಮದ್ ಮುಷ್ತಾಕ್, ಡೇರಾ ಘಾಜಿ ಖಾನ್ ಜಿಲ್ಲೆಯ ಮುಹಮ್ಮದ್ ನಯೀಮ್, ಸರ್ಗೋಡ ಜಿಲ್ಲೆಯ ಅಬ್ದುಲ್ ಶಕೂರ್, ಮುಲ್ತಾನ್ನ ಮುಹಮ್ಮದ್ ಸಬೀರ್, ಲೋದ್ರಾನ್ ಜಿಲ್ಲೆಯ ಮುಹಮ್ಮದ್ ಉಸ್ಮಾನ್, ರಹೀಂ ಯಾರ್ ಖಾನ್ ಜಿಲ್ಲೆಯ ಶಕೀಲ್ ಅಹ್ಮದ್ ಎಂದು ಭಯೋತ್ಪಾದಕರನ್ನು ಗುರುತಿಸಲಗಿದೆ.
ಈ ಮೇಲೆ ಪಟ್ಟಿ ಮಾಡಿದ ಎಲ್ಲರೂ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಲಷ್ಕರ್ ಇ ತೋಯ್ಬಾ ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎಂದು ಎಫ್ಐಎ ಹೇಳಿದೆ. ಈ ಪಟ್ಟಿಯಲ್ಲಿ ದೇಶದ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ಅಥವಾ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಹಫೀಜ್ ಸಯೀದ್ ಯುಎನ್ ಪಟ್ಟಿಮಾಡಿದ ಅಂತಾರಾಷ್ಟ್ರೀಯ ಭಯೋತ್ಪಾದಕ, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ಕಳೆದ ವರ್ಷ 40 ಕ್ಕೂ ಹೆಚ್ಚು ಭಾರತೀಯ ಅರೆಸೈನಿಕ ಪಡೆಗಳನ್ನು ಕೊಂದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿತ್ತು. . ಈ ವರ್ಷದ ಆರಂಭದಲ್ಲಿ, ಪಾಕಿಸ್ತಾನದ ನ್ಯಾಯಾಲಯವು ಉಗ್ರವಾದಕ್ಕೆ ಹಣ ಹೂಡಿಕೆ ಮಾಡಿದ್ದಕ್ಕಾಗಿ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.