Thursday, August 11, 2022

Latest Posts

ಏಕತಾ ಪ್ರತಿಮೆಗೆ ಭೇಟಿ ನೀಡ ಬಯಸುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಏನದು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದ ವಿವಿಧ ಪ್ರದೇಶಗಳನ್ನು ಗುಜರಾತ್​ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸಲು 8 ರೈಲುಗಳಿಗೆ ಜ.17ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

02927/28 ದಾದರ್-ಕೆವಾಡಿಯಾ ಎಕ್ಸ್‌ಪ್ರೆಸ್ (ದೈನಂದಿನ), 09103/04 ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ), 09105/06 ಕೆವಾಡಿಯಾ – ರೇವಾ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ), 09247/48 ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್‌ಪ್ರೆಸ್ (ದೈನಂದಿನ), 09107/08  ಮತ್ತು 09109/10 ಕೆವಾಡಿಯಾ-ಪ್ರತಾಪನಗರ ಎಂಇಎಂಯು (ದೈನಂದಿನ), 09145/46 ನಿಜಾಮುದ್ದೀನ್ – ಕೆವಾಡಿಯಾ ಎಕ್ಸ್‌ಪ್ರೆಸ್ (ವಾರಕ್ಕೆ ಎರಡು ಬಾರಿ), ಪ್ರತಾಪನಗರ-ಕೆವಾಡಿಯಾ ಎಂಇಎಂಯು ರೈಲು (ದೈನಂದಿನ), 09119/20 ಚೆನ್ನೈ – ಕೆವಾಡಿಯಾ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ).

ಬೆಳಗ್ಗೆ 11 ಗಂಟೆಗೆ ಈ  8 ರೈಲುಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss