ಯಾದಗಿರಿ : ನಗರದ ಏಕದಂಡಗಿ ಮಠದ ಪೀಠಾಧಿಪತಿ ಶ್ರೀಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿ(85) ಅವರು ಹೃದಯ ಕಾಯಲೆಯಿಂದ ಕಲಬುರಗಿಯಲ್ಲಿ ಶುಕ್ರವಾರದಂದು ದೈವಾಧೀನರಾಗಿದ್ದಾರೆ.
ಯಾದಗಿರಿಯ (ವಿಶ್ವಕರ್ಮದ) ಏಕದಂಡಗಿ ಮಠದ ಪೀಠಾಧಿಪತಿಯಾಗಿದ್ದ ಶ್ರೀಗಳು ಕಲಬುರಗಿಯ ಜಯದೇವಾ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ಪಡಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವಕರ್ಮ ಸಮಾಜದ ಜಗದ್ಗುರುಗಳಾಗಿದ್ದ ಗುರುನಾಥೇಂದ್ರ ಸ್ವಾಮೀಜಿ ದೇವಿ ಆರಾಧಕರಾಗಿದ್ದರು. ರೆಲಗು, ಮರಾಠಿ ಮತ್ತು ಕನ್ನಡ ಭಾಷಿಯಲ್ಲಿ ಪರಿಣಿತರಾಗಿದ್ದರು.
ಅವರು ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದು ಅನೇಕ ಸಾಮಾಜಿಕ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಸಂಸ್ಕೃತ ಬಲ್ಲವರಾಗಿದ್ದು, ಸುಮಾರು 85 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ವಾಗ್ಮಿಯಾಗಿದ್ದ ಶ್ರೀಗಳಿಗೆ ನೆರೆಯ ಆಂಧ್ರ, ಮಹಾರಾಷ್ಟ್ರದಲ್ಲೂ ಅಪಾರ ಸಂಖ್ಯೆಯ ಭಕ್ತಗಣರನ್ನು ಹೊಂದಿದ್ದಾರೆ.
ನಾಳೆ ನಗರದ ಏಕದಂಡಗಿ ಶ್ರೀ ಮಠದಲ್ಲೇ ಅಂತ್ಯಕ್ರಿಯೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.