Sunday, April 18, 2021

Latest Posts

ಏಕಪಕ್ಷೀಯ ಬದಲಾವಣೆಗಳು ಸ್ವೀಕಾರಾರ್ಹವಲ್ಲ: WhatsApp ಗೆ ಕೇಂದ್ರದಿಂದ ಪತ್ರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಾಟ್ಸಾಪ್ ನ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ವಾಟ್ಸಾಪ್​ಗೆ ಸೂಚಿಸಿದೆ.
ಈ ಕುರಿತು ಸರ್ಕಾರ ವಾಟ್ಸಾಪ್ ಗೆ ಪತ್ರ ಬರೆದಿದ್ದು, ಏಕಪಕ್ಷೀಯ ಬದಲಾವಣೆಗಳು ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಬರೆದ ಪತ್ರದಲ್ಲಿ, ಜಾಗತಿಕವಾಗಿ ಭಾರತವು ವಾಟ್ಸಾಪ್‌ನ ಅತಿದೊಡ್ಡ ಬಳಕೆದಾರರ ನೆಲೆ ಮತ್ತು ಅದರ ಸೇವೆಗಳ ಬಹು ದೊಡ್ಡ ಮಾರುಕಟ್ಟೆಯಾಗಿದೆ. ವಾಟ್ಸಾಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳು ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆಗೆ ಉಂಟಾಗುವ ಪರಿಣಾಮಗಳ ಬಗ್ಗೆ ಗಂಭೀರ ಕಳವಳ ಉಂಟುಮಾಡುತ್ತವೆ ಎಂದು ಬರೆದಿದೆ.
ಉದ್ದೇಶಿತ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಮಾಹಿತಿ ಗೌಪ್ಯತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ಡೇಟಾ ಸುರಕ್ಷತೆಗೆ ಅದರ ವಿಧಾನವನ್ನು ಮರುಪರಿಶೀಲಿಸುವಂತೆ ಕೇಂದ್ರ ಸಚಿವಾಲಯ ಕೇಳಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss