Tuesday, July 5, 2022

Latest Posts

ಏಕಲವ್ಯ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕ್ರೀಡಾ ಪೋಷಕ ಪ್ರಶಸ್ತಿ ಪಟ್ಟಿ ಬಿಡುಗಡೆ

ಚಿಕ್ಕಮಗಳೂರು: 2017, 2018 ಮತ್ತು 2019ನೇ ಸಾಲಿನ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭಾನುವಾರ ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ ಮಾಹಿತಿ ನೀಡಿದ ಅವರು, ಏಕಲವ್ಯ ಪ್ರಶಸ್ತಿಗೆ ಮೂರು ವರ್ಷದಲ್ಲಿ 31 ಮಂದಿ, ಜೀವಮಾನ ಸಾಧನೆಗೆ 6 ಮಂದಿ, ಕ್ರೀಡಾರತ್ನ ಪ್ರಶಸ್ತಿಗೆ 27 ಮಂದಿ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ 5 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಹಾಗೂ ಆಯ್ಕೆ ಸಮಿತಿ ರಚನೆ ಆಗದಿರುವುದು ಮತ್ತಿತರೆ ಕಾರಣಗಳಿಗಾಗಿ ಕಳೆದ ಎರಡು ವರ್ಷದಿಂದ ಪ್ರಶಸ್ತಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ 2017-18 ಸೇರಿದಂತೆ 19ನೇ ಸಾಲಿಗೂ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಏಕಲವ್ಯ ಪ್ರಶಸ್ತಿಗೆ ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ ಮತ್ತು 2 ಲಕ್ಷ ರೂ. ನಗದು, ಜೀವಮಾನ ಸಾಧನೆ ಪ್ರಶಸ್ತಿಗೆ ಪ್ರಶಸ್ತಿ ಫಲಕ, ಸಮವಸ್ತ್ರ ಮತ್ತು 1.50 ಲಕ್ಷ ರೂ.ನಗದು, ಕ್ರೀಡಾರತ್ನ ಪ್ರಶಸ್ತಿಗೆ ಪ್ರಶಸ್ತಿ ಫಲಕ, ಸ್ಕ್ರೋಲ್, ಸಮವಸ್ತ್ರ ಮತ್ತು 1 ಲಕ್ಷ ರೂ. ನಗದು, ಕ್ರೀಡಾಪೋಷಕ ಪ್ರಶಸ್ತಿಗೆ ಪ್ರಶಸ್ತಿ ಪತ್ರ ಮತ್ತು 5 ಲಕ್ಷ ರೂ. ನಗದು ನೀಡಲಾಗುವುದು ಎಂದು ತಿಳಿಸಿದರು.

ಏಕಲವ್ಯ ಪ್ರಶಸ್ತಿ 2017ರ ಪುರಸ್ಕೃತರು: ಎಸ್.ರೀನಾ ಜಾರ್ಜ್-ಶಾಂತಿನಗರ ಬೆಂಗಳೂರು(ಅಥ್ಲೆಟಿಕ್ಸ್), ಯು.ಕೆ.ಮಿಥುಲಾ-ಸಂಜಯ್‍ನಗರ ಬೆಂಗಳೂರು(ಬ್ಯಾಡ್‍ಮಿಂಟನ್), ಎಂ.ಅವಿನಾಶ್- ಬಸವನಗುಡಿ ಬೆಂಗಳೂರು(ಈಜು), ಅರ್ಜುನ್ ಹುಲಕುರ್ಕಿ-ಬೆವಿನಮಟ್ಟಿ ಬಾಗಲಕೋಟೆ(ಕುಸ್ತಿ), ಬಿ.ಕೆ.ಅನಿಲ್ ಕುಮಾರ್-ಸಂಪಂಗಿರಾಮನಗರ ಬೆಂಗಳೂರು(ಬಾಸ್ಕೆಟ್‍ಬಾಲ್), ಎನ್.ಉಷಾರಾಣಿ-ಯಶವಂತಪುರ ಬೆಂಗಳೂರು(ಕಬಡ್ಡಿ), ವಿ.ಖುಷಿ-ಸುಬ್ರಹ್ಮಣ್ಯಪುರ ಬೆಂಗಳೂರು(ಟೇಬಲ್‍ಟೆನ್ನಿಸ್), ಎಂ.ಎನ್.ಪೆÇನ್ನಮ್ಮ-ಪೆÇನ್ನಂಪೇಟೆ ಕೊಡಗು (ಹಾಕಿ), ವಿನಾಯಕ ರೋಖಡೆ-ಶಿಂದೋಳಿ ಬೆಳಗಾವಿ (ವಾಲಿಬಾಲ್), ಎಂ.ದೀಪಾ-ಹಲಸೂರು ಬೆಂಗಳೂರು(ರೋಯಿಂಗ್), ರಾಜು ಅಡಿವೆಪ್ಪ ಭಾಟಿ-ಬಿಳಗಿ ಬಾಗಲಕೋಟೆ(ಸೈಕ್ಲಿಂಗ್), ಎಸ್.ವರ್ಷ-ರಾಜಾಜಿನಗರ ಬೆಂಗಳೂರು(ಬಿಲಿಯಡ್ರ್ಸ್), ಕೆ.ತೇಜಸ್-ಕೆಂಗೇರಿ ಉಪನಗರ ಬೆಂಗಳೂರು(ಶೂಟಿಂಗ್), ಶೇಖರ್ ವೀರಸ್ವಾಮಿ-ಕೆ.ಎಸ್.ಗಾರ್ಡನ್ ಬೆಂಗಳೂರು (ಟೆನ್ನಿಸ್ ಪ್ಯಾರಾ).

ಏಕಲವ್ಯ ಪ್ರಶಸ್ತಿ 2018ರ ಪುರಸ್ಕೃತರು: ಜಿ.ಕೆ.ವಿಜಯಕುಮಾರಿ-ಕಿಕ್ಕೇರಿ ಮಂಡ್ಯ(ಅಥ್ಲೆಟಿಕ್ಸ್), ಎಚ್.ಎಂ.ಬಾಂಧವ್ಯ-ಕೆ.ಆರ್.ಪೇಟೆ ಮಂಡ್ಯ(ಬಾಸ್ಕೆಟ್‍ಬಾಲ್), -Ëವಾದ್ ಮಿರ್ಜಾ-ಕನ್ನಿಂಗ್ ಹ್ಯಾಂ ಕ್ರೆಸೆಂಟ್ ರಸ್ತೆ, ಬೆಂಗಳೂರು(ಈಕ್ವೆಸ್ಟ್ರಿಯನ್), ನಿಖಿನ್ ತಿಮ್ಮಯ್ಯ-ಜೆಪಿ ನಗರ ಬೆಂಗಳೂರು(ಹಾಕಿ), ಮೇಘಾ ಗೂಗಾಡ್-ಕುಲಹಳ್ಳಿ ಬಾಗಲಕೋಟೆ(ಸೈಕ್ಲಿಂಗ್), ಶಕೀನಾ ಕಾತೂನ್-ನಾಯಂಡಹಳ್ಳಿ ಬೆಂಗಳೂರು, ಗೀತಾ ದಾನಪ್ಪಗೊಳ್-ಮಲ್ಲೇಶ್ವರಂ ಬೆಂಗಳೂರು(ಜೂಡೊ), ಕೆ.ಎಲ್.ರಾಹುಲ್-ಬೆನ್ಸೋನ್ ಕ್ರಾಸ್ ರಸ್ತೆ ಬೆಂಗಳೂರು(ಕ್ರಿಕೆಟ್), ಶ್ರೀಹರಿ ನಟರಾಜ್ (ಈಜು)

ಏಕಲವ್ಯ ಪ್ರಶಸ್ತಿ 2019ರ ಪುರಸ್ಕೃತರು: ಅಭಿನಯ ಶೆಟ್ಟಿ-ಕಾರ್ಕಳ ಉಡುಪಿ(ಅಥ್ಲೆಟಿಕ್ಸ್), ಮಯಾಂಕ್ ಅಗರ್‍ವಾಲ್-ಹೊಸೂರು ರಸ್ತೆ ಬೆಂಗಳೂರು (ಕ್ರಿಕೆಟ್), ವೇದಾ ಕೃಷ್ಣಮೂರ್ತಿ. ಕಡೂರು ತಾಲೂಕು ಚಿಕ್ಕಮಗಳೂರು(ಕ್ರಿಕೆಟ್), ವೆಂಕಪ್ಪ ಕೆಂಕಲಗುತ್ತಿ-ತುಲಸಿಗೆರೆ ಬಾಗಲಕೋಟೆ(ಸೈಕ್ಲಿಂಗ್), ಪುಲಿಂದ ಲೋಕೇಶ್ ತಿಮ್ಮಣ್ಣ-ವೀರಾಜಪೇಟೆ ಕೊಡಗು(ಹಾಕಿ), ಖುಷಿ ದಿನೇಶ್-ಕೆ.ಆರ್.ರಸ್ತೆ ಬೆಂಗಳೂರು(ಈಜು), ಪುನೀತ್ ನಂದಕುಮಾರ್-ವಿಜಯನಗರ ಬೆಂಗಳೂರು(ಪ್ಯಾರಾ ಈಜು), ಅಭಿಷೇಕ್ ಎಂ.ಶೆಟ್ಟಿ-ಪುತ್ತೂರು ದಕ್ಷಿಣ ಕನ್ನಡ(ಅಥ್ಲೆಟಿಕ್ಸ್).

ಜೀವಮಾನ ಸಾಧನೆ ಪ್ರಶಸ್ತಿ 2017ರ ಪುರಸ್ಕೃತರು: ಎಂ.ಫೆÉಡ್ರಿಕ್ಸ್-ಟಿ.ಸಿ.ಪಾಳ್ಯ ಬೆಂಗಳೂರು (ಹಾಕಿ), ಡಾ.ಪಟೇಲ್ ಮಹಮ್ಮದ್ ಇಲಿಯಾಸ್-ರೂಬಿ ರೆಸಿಡೆನ್ಸಿ ಬೆಂಗಳೂರು (ವಾಲಿಬಾಲ್).

ಜೀವಮಾನ ಸಾಧನೆ ಪ್ರಶಸ್ತಿ 2018ರ ಪುರಸ್ಕೃತರು: ಸಿ.ಎ.ಕರುಂಬಯ್ಯ-ವಿಜಯನಗರ ಬೆಂಗಳೂರು(ಹಾಕಿ), ಆರ್.ಮಂಜುನಾಥ -ಹೆಬ್ಬಾಳ ಬೆಂಗಳೂರು (ಕಬಡ್ಡಿ).

ಜೀವಮಾನ ಸಾಧನೆ ಪ್ರಶಸ್ತಿ 2019ರ ಪುರಸ್ಕೃತರು: ಶಾಂತಾ ರಂಗಸ್ವಾಮಿ-ಬನಶಂಕರಿ ಬೆಂಗಳೂರು (ಕ್ರಿಕೆಟ್), ಸಂಜೀವ ಆರ್.ಕನಕ-ಗೋಪಾಲಗೌಡ ಬಡಾವಣೆ ಶಿವಮೊಗ್ಗ (ಖೋಖೋ).

ಕ್ರೀಡಾರತ್ನ ಪ್ರಶಸ್ತಿ 2017ರ ಪುರಸ್ಕೃತರು: ಎಂ.ವೀಣಾ-ಟಿ.ನರಸೀಪುರ ಮೈಸೂರು (ಖೋಖೋ), ಕೆ.ಎಸ್.ಕೌಸಲ್ಯ-ಶ್ರೀರಂಗಪಟ್ಟಣ ಮಂಡ್ಯ (ಕಬಡ್ಡಿ), ಜಿ.ಜಯಲಕ್ಷ್ಮೀ-ಬಂಟ್ವಾಳ ದಕ್ಷಿಣ ಕನ್ನಡ(ಬಾಲ್‍ಬ್ಯಾಡ್‍ಮಿಂಟನ್), ಎಚ್.ಎಸ್.ಅನುಶ್ರೀ-ಬೆಳವಿನಕೊಡುಗೆ, ಕೊಪ್ಪ ತಾಲೂಕು ಚಿಕ್ಕಮಗಳೂರು(ಕುಸ್ತಿ), ಎಂ.ರಂಜಿತಾ-ದೊಡ್ಡ ಬಳ್ಳಾಪುರ (ಥ್ರೋಬಾಲ್), ಭೀಮಪ್ಪ ಹಡಪದ-ತುಲಸಿಗೆರೆ, ಬಾಗಲಕೋಟೆ (ಮಲ್ಲಕಂಬ), ಮಹೇಶ್ ಆರ್.ಎರೆಮುನಿ-ಸವಣೂರು ಹಾವೇರಿ (ಆಟ್ಯಾ ಪಾಟ್ಯಾ), ಚಂದ್ರಶೇಖರ ಎಚ್.ಕಲ್ಲಹೊಲದ-ನಕ್ಕರಗೊಂದಿ ಬಾಗಲಕೋಟೆ (ಗುಂಡು ಎತ್ತುವುದು), ಗೋಪಾಲಕೃಷ್ಣ ಪ್ರಭು-ಸೂರತ್ಕಲ್ ದಕ್ಷಿಣ ಕನ್ನಡ(ಕಂಬಳ), ಶ್ರೀನಿವಾಸಗೌಡ-ಮಿಜಾರು ದಕ್ಷಿಣ ಕನ್ನಡ (ಕಂಬಳ), ಮಣಿಕಂದನ್-ಗಾಂಧಿನಗರ, ಬೆಂಗಳೂರು(ಪ್ಯಾರಾ ಕ್ಲೈಂಬಿಂಗ್).

ಕ್ರೀಡಾರತ್ನ ಪ್ರಶಸ್ತಿ 2018ರ ಪುರಸ್ಕೃತರು: ಸಂಪತ್ ನಾಗಪ್ಪ ಯರಗಟ್ಟಿ-ರಾಮದುರ್ಗ ಬೆಳಗಾವಿ (ಆಟ್ಯಾಪಾಟ್ಯಾ), ಸುರೇಶ್ ಶೆಟ್ಟಿ-ಬೆಳ್ತಂಗಡಿ ದಕ್ಷಿಣ ಕನ್ನಡ (ಕಂಬಳ), ಎಚ್.ಎನ್.ಶಿವಕುಮಾರ್-ಹಾಸನ (ಖೋಖೋ), ಬಿ.ಡಿ.ಲಾವಣ್ಯ-ಸೋಮವಾರಪೇಟೆ ಕೊಡಗು(ಬಾಲ್‍ಬ್ಯಾಡ್‍ಮಿಂಟನ್), ಯಮುನಪ್ಪ ಎಂ.ಕಲ್ಲೋಳಿ-ಗೋಕಾಕ್ ಬೆಳಗಾವಿ (ಮಲ್ಲಕಂಬ), ಮಲ್ಲಪ್ಪಗೌಡ ಪಾಟೀಲ್-ದಾವಣಗೆರೆ ( ಕುಸ್ತಿ), ಐ.ಕಿರಣ್‍ಕುಮಾರ್-ಹೆಬ್ಬಾಳ ಬೆಂಗಳೂರು (ಟೆನ್ನಿಕ್ವಾಯ್ಟ್).

ಕ್ರೀಡಾರತ್ನ ಪ್ರಶಸ್ತಿ 2019ರ ಪುರಸ್ಕೃತರು: ಅನಿತಾ ಬಿಚಗಟ್ಟೆ-ಧಾರವಾಡ (ಆಟ್ಯಾಪಾಟ್ಯಾ), ಎಸ್.ಕೆ.ಪಲ್ಲವಿ-ಮೂಡಬಿದಿರೆ ಮಂಗಳೂರು (ಬಾಲ್‍ಬ್ಯಾಡ್‍ಮಿಂಟನ್), ಸುದರ್ಶನ್-ಹಾಸನ (ಖೋಖೋ), ಎಸ್.ರಕ್ಷಿತ್-ಕುಂಬಾರಕೊಪ್ಪಲು ಮೈಸೂರು (ಕಬಡ್ಡಿ), ಅನುಪಮಾ ಎಚ್.ಕೆರಕಲಮಟ್ಟಿ-ಕಲಾದಗಿ ಬಾಗಲಕೋಟೆ (ಮಲ್ಲಕಂಬ), ಕೆ.ಪ್ರವೀಣ್-ಮಂತ್ರಾಡಿ ದಕ್ಷಿಣ ಕನ್ನಡ (ಕಂಬಳ), ಮಂಜುನಾಥ ಎಚ್.-ಶಿವಮೊಗ್ಗ (ಥ್ರೋಬಾಲ್), ಸತೀಶ್ ಪಡತಾರೆ-ಮುಧೋಳ ಬಾಗಲಕೋಟೆ (ಕುಸ್ತಿ), ಅನಿಶಾ ಮಣಿಗಾರ್-ಆರ್.ಟಿ.ನಗರ ಬೆಂಗಳೂರು(ಟೆನ್ನಿಕ್ವಾಯ್ಟ್).

ಕ್ರೀಡಾ ಪೋಷಕ ಪ್ರಶಸ್ತಿ: 2018-19ಕ್ಕೆ ಸ್ವರ್ಣ ಫುಟ್‍ಬಾಲ್ ಅಭಿವೃದ್ಧಿ ಸಂಸ್ಥೆ-ಮಂಡ್ಯ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್-ಹಳಿಯಾಳ, 2019-20ಕ್ಕೆ ಮಂಗಳೂರು ವಿಶ್ವ ವಿದ್ಯಾಲಯ-ಮಂಗಳೂರು, 2020-21ಕ್ಕೆ ಸಿದ್ದಗಂಗಾ ಮಠ ಸಂಸ್ಥೆ-ತುಮಕೂರು, ಮಾಣಿಕಪ್ರಭು ಸ್ಪೋಟ್ರ್ಸ್ ಅಕಾಡೆಮಿ-ಬೀದರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss