Monday, August 8, 2022

Latest Posts

ಏಕ್ ಮಾರ್ ದೋ ತುಕಡಾ, ತಪ್ಪುಮಾಡಿದವರ ಬೆತ್ತಲೆ ಮಾಡಿ: ‘ಡ್ರಗ್ಸ್’ ವಿರುದ್ಧ ನವರಸ ನಾಯಕ ಗರಂ!

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಸ್ಪೋಟಿಸಿರುವ ‘ಡ್ರಗ್ಸ್ ‘ ಬಾಂಬ್ ಸಖತ್ ಸಡ್ಡು ಮಾಡುತ್ತಿದ್ದು, ನವರಸರ ನಾಯಕ ಜಗ್ಗೇಶ್ ಕೂಡಾ ಈಗ ಡ್ರಗ್ಸ್ ಜಾಲದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್, ‘ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ, ನನ್ನ ಬದುಕು ಎನ್ನುವರನ್ನು ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತುಕಡಾ, ತಪ್ಪುಮಾಡಿದವರ ಬೆತ್ತಲೆ ಮಾಡಿ, ಆಗಲಾದರು ಜನಕ್ಕೆ ಅರಿವಾಗಲಿ’ ಎಂದು ಬರೆದುಕೊಂಡಿದ್ದಾರೆ.
‘ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ. ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು, ಅದ ಕಂಡು ನಾನು ನನ್ನ ಆತ್ಮೀಯ ಯುವನಟಗೆ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೆಕಡೆ ಇಂದಿಗು ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು…’ ಎಂದು ಇನ್ನೊಂದು ಟ್ವೀಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
‘ಶ್ರೇಷ್ಠ ಮನುಜನ್ಮ. ಅದುನಶ್ವರ ಸತ್ಯ. ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು. ಉಪ್ಪುತಿಂದವ ನೀರು ಕುಡಿಯುವ!’ ಎಂದು ಅವರು ತಮ್ಮ ಆಕ್ರೋಶವನ್ನು ಅಕ್ಷರಕ್ಕಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss