Monday, August 8, 2022

Latest Posts

ಏನು ತಿಂದರೂ ಹೊಟ್ಟೆ ಭಾರವಾಗುತ್ತಾ? ಅಜೀರ್ಣದ ಲಕ್ಷಣಗಳೇನು? ಈ ಲಕ್ಷಣಗಳು ನಿಮ್ಮಲ್ಲೂ ಇದೆಯಾ? ಇದಕ್ಕೆ ಮನೆಮದ್ದೇನು?

ಕಣ್ಣಮುಂದೆ ಇಷ್ಟವಾಗುವ ಅಷ್ಟೆಲ್ಲಾ ಆಹಾರ ಪದಾರ್ಥಗಳಿಟ್ಟರೆ, ಯಾವುದನ್ನು ತಿನ್ನುವುದು? ಯಾವುದನ್ನು ಬಿಡುವುದು? ಇನ್ನು ಎಲ್ಲಾದರೂ ಬೊಫೆ ಊಟಕ್ಕೆ ಹೋದರಂತೂ ಲೆಕ್ಕವಿಲ್ಲದಷ್ಟು ತಿಂದು ಬರುತ್ತೇವೆ. ಆಮೇಲೆ ಮನೆಗೆ ಬಂದಾಗ ಯಾಕಾದರೂ ಇಷ್ಟು ತಿಂದೆವೋ ಎನಿಸುತ್ತದೆ. ಹೊಟ್ಟೆ ಭಾರ, ಅಜೀರ್ಣ ವಾಂತಿಯೂ ಆಗಬಹುದು. ಹಾಗಾದರೆ ನಾವು ತಿನ್ನುವ ಆಹಾರ ನಮಗೇಕೆ ಜೀರ್ಣವಾಗುವುದಿಲ್ಲ? ಅಜೀರ್ಣ ಎಂದರೇನು ?
ಅಜೀರ್ಣ ಎಂದರೇನು?
ಮೇಲ್‌ಹೊಟ್ಟೆಯಲ್ಲಿ ನೋವು, ಇದು ರೋಗವಲ್ಲ, ಆದರೆ ಪ್ರತಿ ಬಾರಿ ಇದನ್ನು ಅನುಭವಿಸುವವರಿಗೆ ರೋಗವೆಂದೇ ಅನಿಸುತ್ತದೆ. ಹೊಟ್ಟೆನೋವು,ಹೊಟ್ಟೆಬಾರವೂ ಆಗುತ್ತದೆ. ಒಬ್ಬರಿಗೆ ಒಂದೊಂದು ರೀತಿಯ ಅಜೀರ್ಣ ಆಗುತ್ತದೆ. ಇದು ಹೀಗೆ ಮುಂದುವರಿದರೆ ಬೇರೆ ಲಕ್ಷಣಗಳು ಕಾಣುತ್ತವೆ.

  • ಅಜೀರ್ಣದ ಲಕ್ಷಣಗಳೇನು?
  • ಸ್ವಲ್ಪ ತಿಂದ ತಕ್ಷಣವೇ ಹೊಟ್ಟೆ ತುಂಬುವುದು
  • ಸ್ವಲ್ಪ ತಿಂದರೂ ಅತಿ ಎನಿಸಿ, ಹೊಟ್ಟೆ ಉಬ್ಬರಿಸುವುದು
  • ಮೇಲು ಹೊಟ್ಟೆಯಲ್ಲಿ ಹೆಚ್ಚು ನೋವು
  • ಮೇಲು ಹೊಟ್ಟೆ ಉರಿ
  • ಹೊಟ್ಟೆ ಊದಿಕೊಂಡಂತೆ ಭಾಸ
  • ವಾಂತಿ
  • ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
  • ಒಂದೇ ಸಲಕ್ಕೆ ತೂಕ ಇಳಿದರೆ, ಅಥವಾ ಹಸಿವೇ ಆಗದಿದ್ದರೆ
  • ಪದೇ ಪದೆ ವಾಂತಿ ಅಥವಾ ರಕ್ತವಾಂತಿ
  • ಮಲದ ಬಣ್ಣ ಕಪ್ಪಾದರೆ
  • ಆಹಾರ ನುಂಗುವುದೇ ಕಷ್ಟವೆನಿಸಿದರೆ
  • ಸುಸ್ತು, ತಲೆಸುತ್ತು ಬಂದರೆ
  • ಅಜೀರ್ಣ ಆದಾಗ ಈ ಮನೆಮದ್ದುಗಳನ್ನು ಅನುಸರಿಸಿ
  • ಪುದೀನಾ ಟೀ: ಮನೆಯಲ್ಲೇ ಪುದೀನಾ ನಿಂಬೆಹಣ್ಣು ಹಾಗೂ ಬೆಲ್ಲ ಹಾಕಿ ಟೀ ಮಾಡಿಕೊಂಡು ಊಟ ಆದ ನಂತರ ಕುಡಿಯಿರಿ.
  • ಆಪಲ್ ಸೈಡರ್ ವಿನೇಗರ್: ಆಪಲ್ ಸೈಡರ್ ವಿನೇಗರ್ ನಿಂದ ಅಜೀರ್ಣ ಅಷ್ಟೇ ಅಲ್ಲ, ತೂಕ ಇಳಿಕೆಯೂ ಆಗುತ್ತದೆ. ಪ್ರತಿದಿನ ಊಟದ ಮುಂಚೆ ಒಂದು ಸ್ಪೂನ್ ವಿನೇಗರ್‌ನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ.
  • ಶುಂಠಿ: ಹೊಟ್ಟೆಯಲ್ಲಿರುವ ಆಸಿಡ್ ಓಡಿಸಲು ಶುಂಠಿ ರಾಮಬಾಣ ನಿತ್ಯವೂ ಒಂದು ಗ್ಲಾಸ್ ಶುಂಠಿ ಟೀ ಕುಡಿಯುವುದರಿಂದ ಅಜೀರ್ಣ ದೂರವಾಗುತ್ತದೆ.
  • ಜೀರಿಗೆ ಟೀ: ಪ್ರತಿನಿತ್ಯ ಊಟ ಆದ ನಂತರ ಒಂದು ಚಿಟಿಕೆ ಜೀರಿಗೆ ಬಾಯಿಗೆ ಹಾಕಿಕೊಳ್ಳಿ ಅಥವಾ ಜೀರಿಗೆ ಬೆಲ್ಲ ಹಾಕಿ ಟೀ ಮಾಡಿ ಕುಡಿಯಿರಿ ಇದರಿಂದ ಅಜೀರ್ಣ ನಿಮ್ಮ ಬಳಿಯೂ ಸುಳಿಯುವುದಿಲ್ಲ.
  • ಸೋಡಾ: ತಣ್ಣನೆ ನೀರಿಗೆ ನಿಂಬೆ ಸೋಡಾ ಉಪ್ಪು ಹಾಗೂ ನೀರು ಹಾಕಿಕೊಂಡು ಊಟದ ನಂತರ ಕುಡಿಯಿರಿ. ಇದರಿಂದ ಗ್ಯಾಸ್ ಹೊರಬರುತ್ತದೆ. ಅಜೀರ್ಣ ಸಮಸ್ಯೆಯೂ ಆಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss