ಹೊಸದಿಲ್ಲಿ: ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಒಟ್ಟಾರೆ ರಫ್ತು (ಸರಕು ಮತ್ತು ಸೇವೆಗಳು) 25.42% ರಷ್ಟು ಕುಸಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.
ಈ ಬಗ್ಗೆ ಲೋಕಸಭೆಯಲ್ಲಿ ಹೇಳಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, 2020 ರ ಜೂನ್ ತಿಂಗಳಿಗೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಇದರಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ತ್ವರಿತ ಅಂದಾಜು 107.8 ರಷ್ಟಿದ್ದು, ಕ್ರಮವಾಗಿ ಏಪ್ರಿಲ್, 2020 ಮತ್ತು ಮೇ, 2020 ಹೋಲಿಸಿದರೆ 53.6 ಮತ್ತು 89.5 ಕ್ಕೆ ಇಳಿಕೆಯಾಗಿದೆ ಅಂತ ತಿಳಿಸಿದ್ದಾರೆ.
ರಫ್ತು ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿದೇಶಿ ವ್ಯಾಪಾರ ನೀತಿಯ (2015-20) ಸಿಂಧುತ್ವವನ್ನು ಒಂದು ವರ್ಷ ವಿಸ್ತರಿಸಲಾಗಿದೆ, ಅಂದರೆ 31-3-2021ರವರೆಗೆ ವಿಸ್ತರಿಸಲಾಗಿದೆ ಮಾಹಿತಿ ನೀಡಿದ್ದಾರೆ.