ಚೆನ್ನೈ: ತಮಿಳುನಾಡಿನಲ್ಲಿ ಎರಡು ವರ್ಷದ ಹಿಂದಿನಿಮದಲೇ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಚರ್ಚೆ ನಡೆಯುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ಏಪ್ರಿಲ್ ನಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರಜನಿಕಾಂತ್ ಅಭಿಮಾನಿ ಬಳಗವಾದ ರಜನಿ ಮಕ್ಕಲ್ ಮಂದ್ರಮ್ ನ ಉನ್ನತ ಪದಾಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಇನ್ನೂ ಖಚಿತವಾಗಿ ದಿನಾಂಕ ನಿಗದಿಯಾಗದಿದ್ದರೂ ರಜನಿಯ ಹೊಸ ಪಕ್ಷ ಏಪ್ರಿಲ್ 14ರ ನಂತರ ಸ್ಥಾಪನೆಯಾಗುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆಯನ್ನು ಸೋಲಿಸಲು ರಜನಿಕಾಂತ್ ಗೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ಸಹಕರಿಸಲಿದೆ ಎಂದು ತಿಳಿಸಿದ್ದಾರೆ. 2017ರ ಡಿಸೆಂಬರ್ 31 ರಂದು ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು.