ಹೊಸದಿಗಂತ ಆನ್ಲೈನ್ ಡೆಸ್ಕ್:
ಏರೋ ಇಂಡಿಯಾ ಕಾರ್ಯಕ್ರಮ ನಡೆಸಲು ಬೆಂಗಳೂರಿಗಿಂತ ಉತ್ತಮ ನಗರ ಇನ್ನೊಂದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಏರ್ ಇಂಡಿಯಾ 2021 ಗೆ ಸಂಬಂಧಿಸಿದಂತೆ ಅಪೆಕ್ಸ್ ಸಮಿತಿ ಸಭೆ ನಡೆದಿದ್ದು, ಅದರಲ್ಲಿ ಮಾತನಾಡಿದರು.
ಫೆ. 3 ರಿಂದ ಏರೋ ಇಂಡಿಯಾ ಶೋ ಹಿನ್ನೆಲೆ ಎಲ್ಲ ಮುಂಜಾಗ್ರತೆಗಳ ಬಗ್ಗೆ ಸಭೆಯಲ್ಲಿ ಮಾತನಾಡಲಾಯಿತು. ಶೋ ಯಶಸ್ವಿಯಾಗಿ ನಡೆಸಲು ಸಿದ್ಧತೆ ಮಾಡಲಾಗಿದೆ. ಏರ್ ಶೋ ಅದ್ಧೂರಿಯಾಗಿ ನಡೆಯಲಿದೆ. ಏರ್ ಶೋ ಆಯೋಜಿಸುವುದರಲ್ಲಿ ಬೆಂಗಳೂರಿಗೆ ಇರುವ ಅನುಭವ ಬೇರೆ ಯಾವ ನಗರಕ್ಕೂ ಇಲ್ಲ.
ಕಳೆದ ಬಾರಿಯ ಅವಘಡ ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.