ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ ಆರಂಭಗೊಂಡ ಏರೋ ಇಂಡಿಯಾ -2021 ಇಂದು ತೆರೆ ಕಂಡಿದೆ.
ಮೂರು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದಂತ ವೈಮಾನಿಕ ಪ್ರದರ್ಶನ ಅದ್ದೂರಿಯಾಗಿ ಮುಕ್ತಾಯಗೊಂಡಿದ್ದು, ಸಮಾರಾಪ ಸಮಾರಂಭದಲ್ಲಿ ಭಾಗವಹಿಸಿದಂತ ರಾಷ್ಟ್ರಪತಿ ರಾಮನಾಥ ಕೋವಿಂದ್ ಕರ್ನಾಟಕ ಮತ್ತು ಸಿಎಂ ಯಡಿಯೂರಪ್ಪ ಅವರನ್ನು ಪ್ರಶಂಸಿದರು.
ಸಮಾರೋಪ ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಭಾರತದಲ್ಲೇ ತಯಾರಾಗಿರುವ 4 ಹೆಲಿಕಾಪ್ಟರ್ ಗಳಿಂದ ಭೀಮ್ ಫಾರ್ಮೇಷನ್ ಮಾಡಲಾಗಿದೆ. ಕೊರೋನಾ ಸೋಂಕಿನ ಭೀತಿಯ ನಡುವೆಯೂ ಯಶಸ್ವಿಯಾಗಿ ಏರೋ ಇಂಡಿಯಾ ಪ್ರದರ್ಶನಗೊಂಡಿದೆ. ಇದಕ್ಕೆ ಕಾರಣವಾದಂತ ಕರ್ನಾಟಕ ಮತ್ತು ಸಿಎಂ ಯಡಿಯೂರಪ್ಪ ಅವರ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಅದ್ದೂರಿ ತೆರೆ
ಕಳೆದೆರಡು ದಿನಗಳಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ದೇಶಿ ನಿರ್ಮಿತ ತೇಜಸ್, ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಸುಖೋಯ್, ರಫೆಲ್ ಯುದ್ಧ ವಿಮಾನಗಳು ಬಾನಿನಲ್ಲಿ ಮೈ ನವಿರೇಳಿಸುವ ಕಸರತ್ತು ನಡೆಸಿದರೆ, ಇನ್ನು ವಿದೇಶಗಳಲ್ಲೂ ಮೆಚ್ಚುಗೆ ಪಡೆದಿರುವ ಸೂರ್ಯಕಿರಣ್ ಹಾಗೂ ಸಾರಂಗ್ ಹೆಲಿಕಾಪ್ಟರ್ ತಂಡದ ಸದಸ್ಯರು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಹಲವು ರೋಮಾಂಚನಕಾರಿ ಪ್ರದರ್ಶನ ನೀಡಿದ್ದು ಪ್ರಮುಖ ಆಕರ್ಷಣೆಯಾಗಿತ್ತು.