Tuesday, January 19, 2021

Latest Posts

ಏರ್ ಪೋರ್ಟ್ ನಲ್ಲಿ ನಾಪತ್ತೆಯಾಗಿದ್ದ ಬೆಕ್ಕು 11 ದಿನಗಳ ನಂತರ ಸಿಕ್ತು… ಹೇಗೆ ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ನಾಯಿಯ ಸಹಾಯದಿಂದ 11 ದಿನಗಳ ನಂತರ ಬೆಕ್ಕುಯೊಂದು ಪತ್ತೆಯಾಗಿದೆ.

ಹೌದು ಕ್ರಿಸ್ ಮಸ್ ಈವ್ ಸಮಯದಲ್ಲಿ ಟೇಲರ್ ಲೇ ಅವರ ಪ್ರೀತಿಯ ಬೆಕ್ಕು ಮುಜ್ಜಿ  ನ್ಯೂಯಾರ್ಕ್ ನ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ಕೈ ತಪ್ಪಿಸಿಕೊಂಡಿತ್ತು.  ಅದು ನಿಲ್ದಾಣದ ಸೀಲಿಂಗ್ ನಲ್ಲಿ ಸಿಲುಕಿಕೊಂಡಿತ್ತು. ಅದನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ. ಬಳಿಕ ಕೊನೆಗೆ ನಾಯಿಯೊಂದು ಅದನ್ನು ಹುಡುಕಿಕೊಟ್ಟಿದೆ.

ಟೇಲರ್ ತಮ್ಮ ಕುಟುಂಬದ ಜತೆ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮೂಲ ಮನೆಗೆ ತೆರಳುತ್ತಿದ್ದರು. ಈ ವೇಳೆ ಏರ್ ಪೋರ್ಟ್ ಅಧಿಕಾರಿಗಳು ಬ್ಯಾಗ್ ನಲ್ಲಿದ್ದ ಬೆಕ್ಕನ್ನು ಹೊರ ತೆಗೆಯಲು ಹೇಳಿದರು.  ಈ ವೇಳೆ ಮೆಟಲ್ ಡಿಟೆಕ್ಟರ್ ಬಳಿ ಬರುತ್ತಿದ್ದಂತೆ ಹೆದರಿದ ಬೆಕ್ಕು ಯಜಮಾನನ ಕೈ ಕಚ್ಚಿ ಪರಾರಿಯಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!