Tuesday, July 5, 2022

Latest Posts

ಏಳು ತಿಂಗಳು ಗೆಸ್ಟ್ ಲೆಕ್ಚರ್ ಆಗಿದ್ದೆ… ಈಗ ಪ್ರಿನ್ಸಿಪಲ್ ಆಗಿದ್ದೇನೆ: ಹೊರಟ್ಟಿ

ಹೊಸದಿಗಂತ ವರದಿ, ಬಾಗಲಕೋಟೆ:

ದೇಶದಲ್ಲೇ ಮಾದರಿ ವಿಧಾನಪರಿಷತ್ ಮಾಡಲು ಪ್ರಯತ್ನಿಸುವೆ. ಅದರ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ‌ನಿರ್ವಹಿಸುವೆ.
ಹಿಂದಿನ‌ ಕಹಿ ಘಟನೆಗಳು ಮರುಕಳಿಸದಂತೆ ಸದಸನದ ಗೌರವ ಹೆಚ್ಚಿಸುವ ಗುರಿ ಹೊಂದಿದ್ದೇನೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ‌ ಭಾಂಡಗೆ ಮನೆಗೆ ಭಾನುವಾರ ಸೌಜನ್ಯಯುತ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಹೇಳಿದರು.
ಈ ಹಿಂದೆ ಏಳು ತಿಂಗಳು ಸಭಾಪತಿಯಾಗಿದ್ದಾಗ ಗೆಸ್ಟ್ ಲೆಕ್ಚರ್ ಆಗಿದ್ದೆ. ಈಗ ಪ್ರಿನ್ಸಿಪಲ್ ಆಗಿದ್ದೇನೆ ಅಂತ ಮೊನ್ನೆ ಹೇಳಿದ್ದೆ.ಅದೇ ರೀತಿ ತಂದೆ ತಾಯಿ, ಜನರ ಪುಣ್ಯದಿಂದ ಒಂದು ಉನ್ನತ ಹುದ್ದೆಗೆ ಏರಿದ್ದೇನೆ. ಓರ್ವ ಶಿಕ್ಷಕನಾಗಿ ಗೌರವಯುತ ಸ್ಥಾನಕ್ಕೇರಿದ್ದೇನೆ.‌ರಾಜ್ಯಪಾಲರ ನಂತರ ಸಭಾಪತಿ ಗೌರವ ಸ್ಥಾನವಾಗಿದೆ. ದೇಶದಲ್ಲೇ ಮಾದರಿ ವಿಧಾನಪರಿಷತ್ ಮಾಡಲು ಎಲ್ಲರೀತಿಯ ಪ್ರಯತ್ನ ಮಾಡುವೆ ಎಂದರು.
ಸ್ವಾಮೀಜಿಗಳ‌ ಮೀಸಲಾತಿ ಹೋರಾಟದ ಬಗ್ಗೆ ನಾನೇನು ಹೇಳುವುದಿಲ್ಲ. ಅವರು‌ ಎಲ್ಲಾ ತಿಳಿದವರಿದ್ದಾರೆ. ಅವರು ಏನ್ ಮಾತನಾಡ್ತಾರೋ ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss