Wednesday, August 17, 2022

Latest Posts

ಏಳು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರಿಂದ ಪ್ರತಿಭಟನೆ

ಮೈಸೂರು: ಕಳೆದ ೭ ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ನಗರದಲ್ಲಿರುವ ಅರಣ್ಯ ಭವನದ ಎದುರು ಜಮಾಯಿಸಿದ ದಿನಗೂಲಿ ನೌಕರರು ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಸಂಬಂಧಪಟ್ಟ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ೫೦ ಮಂದಿ ದಿನಗೂಲಿ ನೌಕರರಿಗೆ ಕಳೆದ ೭ತಿಂಗಳಿಂದ ವೇತನ ನೀಡಿಲ್ಲ. ನಾವು ದಿನಗೂಲಿ ನೌಕರರು. ಈ ರೀತಿ ಸಂಬಳ ನೀಡದೇ ಇದ್ದರೆ ನಮ್ಮ ಸಂಸಾರ ನಿರ್ವಹಣೆ ಮಾಡುವುದು ಹೇಗೆ? ಹಣವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ತಮ್ಮ ಸಂಕಷ್ಟವನ್ನು ಅಲವತ್ತುಕೊಂಡರು.

ಕೂಡಲೇ ನಮಗೆ ಕಳೆದ ೭ತಿಂಗಳ ಬಾಕಿ ವೇತನವನ್ನು ಪಾವತಿಸಬೇಕು, ಇನ್ನು ಮುಂದೆ ತಿಂಗಳಿಗೆ ಸರಿಯಾಗಿ ವೇತನವನ್ನು ಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡ ನಂಜುAಡಸ್ವಾಮಿ ಸೇರಿದಂತೆ ದಿನಗೂಲಿ ನೌಕರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!