ಕನಕಪುರ: ಕನಕಪುರದ ಹಾರೋಬೆಲೆಯ ಕಪಾಲಿ ಬೆಟ್ಟದಲ್ಲಿ ಡಿ.ಕೆ. ಶಿವಕುಮಾರ್ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಲು ಇಂದು ಕನಕಪುರದಲ್ಲಿ “ಕನಕಪುರ ಚಲೋ” ಪ್ರತಿಭಟನೆ.
ಕಪಾಲಿ ಬೆಟ್ಟವನ್ನು ಏಸು ಬೆಟ್ಟವೆಂದು ಮರು ನಾಮಕರಣ ಮಾಡಿ, ಜಗತ್ತಿನ ಅತಿ ಎತ್ತರವಾದ ಏಸು ಪ್ರತಿಮೆಯನ್ನು ನಿರ್ಮಿಸಲು ಮುಂದಾದ ಡಿ.ಕೆ.ಶಿವಕುಮಾರ್ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಕನಕಪುರ, ರಾಮನಗರ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಸಂಘಟನೆಯವರು ಸ್ಥಳಕ್ಕೆ ಜಮಾಯಿಸಿದ್ದಾರೆ. ಕನಕಪುರದಲ್ಲಿನ ಅಯ್ಯಪ್ಪ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಕನಕಪುರದಲ್ಲಿ ಕೇಸರಿ ಕೆಂಡಾಮಂಡಲವಾಗಿದೆ.