ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದಂತ ಬಹುಕೋಟಿ ವಂಚನೆ ಜಾಲ ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮನ್ಸೂರ್ ಖಾನ್ ಗೆ ಜಾಮೀನು ಸಿಕ್ಕಿದೆ.
ಇಡಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಆರೋಪಿ ಮನ್ಸೂರ್ ಗೆ ಜಾಮೀನು ನೀಡಿದ್ದರೂ, ಬಿಡಗಡೆ ಭಾಗ್ಯವಿಲ್ಲ. ಏಕೆಂದರೆ ಸಿಬಿಐ ಕೇಸ್ ನಲ್ಲಿ ಜಾಮೀನು ಸಿಕ್ಕಿಲ್ಲ.
ಇಡಿ ಕೇಸ್ ನಲ್ಲಿ ಮನ್ಸೂರ್ ಖಾನ್ ಗೆ ಜಾಮೀನು ನೀಡಲಾಗಿದ್ದರೂ, ಸಿಬಿಐ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ದಾಖಲಿಸಲಾಗಿರುವಂತ ಪ್ರಕರಣದಲ್ಲಿ ಜಾಮೀನು ದೊರೆತಿಲ್ಲ. ಹೀಗಾಗಿ ಇಡಿ ಪ್ರಕರಣದಲ್ಲಿ ಜಾಮೀನು ದೊರೆತರು, ರಿಲೀಸ್ ಭಾಗ್ಯವಿಲ್ಲ ಎಂಬಂತೆ ಆಗಿದೆ.