Wednesday, August 17, 2022

Latest Posts

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಹಣ ಕಳೆದುಕೊಂಡ ಠೇವಣಿದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳುವಂತೆ ಸಕ್ಷಮ ಪ್ರಾಧಿಕಾರ ಹಾಗೂ ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಹರ್ಷ ಗುಪ್ತ ತಿಳಿಸಿದ್ದಾರೆ.
ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರು ಕ್ಲೇಮು ಅರ್ಜಿಗಳ ಸ್ವೀಕೃತಿಯು ದಿನಾಂಕ 25-11-2020ರಿಂದ ಪ್ರಾರಂಭವಾಗಲಿದ್ದು, ಕ್ಲೇಮು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದ ದಿನಾಂಕದಿಂದ ಒಂದು ತಿಂಗಳಲ್ಲಿ ಅಂದರೆ ದಿನಾಂಕ 24-12-2020ರೊಳಗಾಗಿ ಸಲ್ಲಿಸಬಹುದಾಗಿರುತ್ತದೆ. ತದ ನಂತ್ರ ಯಾವುದೇ ಕ್ಲೇಮು ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.ಇನ್ನೂ ಐಎಂಎ ಠೇವಣಿದಾರರು ಯಾವುದೇ ಬೆಂಗಳೂರು-1, ಇಲ್ಲವೇ ಕರ್ನಾಟಕ-1, ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿರುವ ಆಪರೇಟರ್ ಗಳ ಸಹಾಯದಿಂದ ಆನ್ ಲೈನ್ ಮುಖಾಂತರ ಕ್ಲೇಮು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಅಲ್ಲದೇ ಎಲ್ಲಿಯಾದರೂ ತಮ್ಮದೇ ಆದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಠೇವಣಿದಾರರು ಆನ್ ಲೈನ್ ಅರ್ಜಿಗಳನ್ನು ಆಧಾರ್ ಮೂಲಕ ಅಥವಾ ತನ್ನ ಬ್ಯಾಂಕ್ ಖಾತೆಯಿಂದ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಖಾತೆಗೆ ರೂ.1 ನ್ನು ವರ್ಗಾಯಿಸಿದ ಯುಟಿಆರ್ ಸಂಖ್ಯೆ ಮೂಲಕ ಅರ್ಜಿದಾರರು ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಖಾತೆ ಸಂಖ್ಯೆ 6442116442 ಮತ್ತು ಐಎಫ್‌ಎಸ್ ಸಿ ಸಂಕೇತ HDFC0001748 ಆಗಿರುತ್ತದೆ.
ಐಎಂಎ ವಹಿವಾಟಿಗೆ ಬಳಸಿದ ಠೇವಣಿದಾರರ ಬ್ಯಾಂಕ್ ಖಾತೆಯು ಚಾಲನೆಯಲ್ಲಿದ್ದ ಐಎಂಎ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳಾದ ಬಾಂಡ್ ಪ್ರಮಾಣಪತ್ರ, ಷೇರು ಪ್ರಮಾಣ ಪತ್ರ ಇತ್ಯಾದಿಗಳನ್ನು ಸಲ್ಲಿಸಬೇಕಾಗಿರುವುದಿಲ್ಲ. ಇಲ್ಲದಿದ್ದಲ್ಲಿ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ.
ಠೇವಣಿದಾರರು ಸಲ್ಲಿಸಿದ ಹೂಡಿಕೆ ವಿವರಗಳು ಐಎಂಎ ನಿರ್ವಹಿಸುತ್ತಿದ್ದ ದತ್ತಾಂಶದೊಂದಿಗೆ ಹೊಂದಾಣಿಕೆಯಾದಲ್ಲಿ, ಠೇವಣಿದಾರರು ಯಾವುದೇ ಹೂಡಿಕೆ ರಸೀದಿಗಳನ್ನು ಸಲ್ಲಿಸಬೇಕಾಗಿರುವುದಿಲ್ಲ. ಇಲ್ಲದಿದ್ದಲ್ಲಿ ಹೂಡಿಕೆ ರಸೀದಿಗಳನ್ನು ಸಲ್ಲಿಸಬೇಕಾಗಿರುತ್ತದೆ.
ಆನ್ ಲೈನ್ ಅರ್ಜಿದಾರರು ಮೇಲ್ಕಂಡಂತೆ ವಿವರಿಸಿರುವ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ, ಸಂಬಂಧಿಸಿದ ಕಾರ್ಯವ್ಯಾಪ್ತಿಯ ತಹಶೀಲ್ದಾರರಿಂದ ಕ್ಲೇಮು ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದಿಂದ 60 ದಿನಗಳ ಒಳಗಾಗಿ ಅಂದರೆ ದಿನಾಂಕ 24-02-2021ರ ಒಳಗಾಗಿ ಇ-ದೃಢೀಕರಿಸುವುದು ಅಗತ್ಯವಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!