Friday, August 19, 2022

Latest Posts

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕೊಳ್ಳಲು  ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ ಆರ್ಗನೈಸೇಷನ್‌ (ಪಿಇಎಸ್‌ಒ)ಗೆ ಅನುಮತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ಕೊರೋನಾ ವೈರಸ್‌ ಮಹಾಮಾರಿಯಿಂದಾಗಿ ತುರ್ತಾಗಿ ಆಮ್ಲಜನಕದ ಅವಶ್ಯಕತೆ ಇದೆ. ಹೀಗಾಗಿ ಹೆಚ್ಚು ಆಕ್ಸಿಜನ್‌ ಇರುವ ಪ್ರದೇಶಗಳಿಂದ ಕಡಿಮೆ ಇರುವ ಪ್ರದೇಶಗಳಿಗೆ ಪೂರೈಕೆ ಮಾಡಬೇಕು. ಹೀಗಾಗಿ ಐಎಸ್‌ಒ ಕಂಟೇನರ್‌ಗಳಲ್ಲಿ ಲಿಕ್ವಿಡ್‌ ಆಕ್ಸಿಜನ್ ಸಾಗಣೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ.‌
ಹೆಚ್ಚಿನ ಪ್ರಮಾಣದಲ್ಲಿ ದ್ರವಗಳನ್ನು ಸಾಗಿಸಲು ಅನುಕೂಲವಾಗುವಂತೆ ಇವುಗಳ ವಿನ್ಯಾಸ ಮಾಡಲಾಗಿರುತ್ತದೆ ಒಂದು ಟ್ಯಾಂಕರ್‌ 20 ಎಂಟಿ ಲಿಕ್ವಿಡ್‌ ಅನ್ನು ಸಾಗಣೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT), ವಾಣಿಜ್ಯ ಮತ್ತು ಕೈಗಾರಿಗೆ ಸಚಿವಾಲಯ, ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ ಆರ್ಗನೈಸೇಷನ್‌ಗೆ ದೇಶದೊಳಗೆ ರಸ್ತೆ ಮಾರ್ಗವಾಗಿ ದ್ರವ ರೂಪದ ಆಮ್ಲಜನಕ ಸಾಗಣೆಗೆ ಅವಕಾಶ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!