spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಟಿಯಲ್ಲಿ ಈ ನಿರ್ದಿಷ್ಟ ಕೆಲಸದವರಿಗೆ ಸಿಗ್ತಿದೆ ಭರ್ಜರಿ ಸಂಬಳದೇರಿಕೆ!

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ಮಾಹಾಮಾರಿ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಗಣನೀಯ ಪರಿಣಾಮ ಬೀರಿತು. ಅದರಲ್ಲೂ ವಿಶೇಷವಾಗಿ ಐಟಿ ವಲಯದಲ್ಲಿ ತನ್ನ ಕರಿ ನೆರಳಿನ ಚಾಪು ಮೂಡಿಸಿತು. ಎಷ್ಟೋ ಕಾರ್ಪೊರೇಟ್ ಕಂಪನಿಗಳು ಸಂಬಳಕೊಡಲಾಗದೇ ಉದ್ಯೋಗಿಗಳನ್ನು ಕಡಿತ ಗೊಳಿಸಿತ್ತು.
ಆದರೆ ಈಗ ನೆಲಕಚ್ಚಿರುವ ಕಾರ್ಪೊರೇಟ್ ವಲಯ ಸ್ವಲ್ಪ ತಲೆ ಎತ್ತುತ್ತಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತೆ ಪ್ರಗತಿಯ ದಾರಿಯಲ್ಲಿ ಹೆಚ್ಚೆಇಡುತ್ತಿದ್ದು, ಹೊಸ ನೇಮಕಾತಿಗೆ ಸಿದ್ಧವಾಗಿದೆ.
ಕೋವಿಡ್ ಮೊದಲ ಅಲೆಯು ಉತ್ತುಂಗಕ್ಕೇರಿದಾಗ ಐಟಿ ಕಂಪನಿಗಳು ಹೊಸ ನೇಮಕಾತಿಯಲ್ಲಿ 50% ಕಡಿತ ಮಾಡಿತ್ತು. ನಂತರ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಸೂಚಿಸಿತು. ಎರಡನೇ ಅಲೆಯ ಸಂದರ್ಭ ಟೆಂಡರ್ ಮಾದರಿಯಲ್ಲಿ ನೇಮಕಾತಿ ಆರಂಭಿಸಿತ್ತು.
ಆದರೆ ಈಗ ‘ಜಾಬ್ ಸರ್ಚ್ ಪೋರ್ಟಲ್ ಇಂಡೀಡ್ ಇಂಡಿಯಾ’, ವರದಿಯೊಂದನ್ನು ಬಹಿರಂಗಪಡಿಸಿದ್ದು, ಇದರ ಪ್ರಕಾರ ಕೋವಿಡ್ ನಂತರ ಐಟಿ ವೃತ್ತಿಪರರ ಬೇಡಿಕೆಯು ಶೇಕಡಾ 400 ರಷ್ಟು ಹೆಚ್ಚಿದೆ.
ಈ ವರದಿಯು ಅಪ್ಲಿಕೇಶನ್ ಡೆವಲಪರ್, ಲೀಡ್ ಕನ್ಸಲ್ಟೆಂಟ್, ಸೇಲ್ಸ್ಫೋರ್ಸ್ ಡೆವಲಪರ್ ಮತ್ತು ಸೈಟ್ ಎಂಜಿನಿಯರ್ ಸೇರಿದಂತೆ ನುರಿತ ತಾಂತ್ರಿಕ ವೃತ್ತಿಪರರ ಬೇಡಿಕೆ 2020ರ ಜನವರಿಯಿಂದ ಫೆಬ್ರವರಿ 2021 ರ ನಡುವೆ ಶೇಕಡಾ 150-300 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಐಟಿ ಕಂನಿಗಳು ಸಂಬಳ ಮತ್ತು ನೇಮಕಾತಿ ಕೂಡ ಹೆಚ್ಚಿಸಿದೆ. ಸ್ಟಾಕ್ ಇಂಜಿನಿಯರ್ಗಳಿಗೆ ಶೇಕಡಾ 70-120ರಷ್ಟು ವೇತನ ಹೆಚ್ಚಿಸಿದೆ ಎಂದು ಇಂಡೀಡ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ಭಾರತೀಯ ಐಟಿ ಮೇಜರ್ ಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಇನ್ಫೋಸಿಸ್ ಭಾರತದಾದ್ಯಂತ ದಾಖಲೆ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಇತ್ತೀಚೆಗಷ್ಟೆ ಟಿಸಿಎಸ್ ಅನುಭವವಿ ಮಹಿಳಾ ವೃತ್ತಿಪರರ ಅತಿದೊಡ್ಡ ನೇಮಕಾತಿ ಕೈಗೊಳ್ಳುವುದಾಗಿ ಘೋಷಿಸಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss