Friday, July 1, 2022

Latest Posts

ಐಟಿ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ಮಾಡಿ, ಹಣದೋಚಿದ್ದ ಮೂವರ ಬಂಧನ

ಹೊಸದಿಗಂತ ವರದಿ ಮೈಸೂರು:

ಐಟಿ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ಮಾಡಿ, ಅವರಲ್ಲಿದ್ದ ಹಣ ದೋಚಿದ್ದ ಮೂವರು ದರೋಡೆಕೋರರನ್ನು ಮೈಸೂರಿನ ಮೇಟಗಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಬೆಲವತ್ತ ಗ್ರಾಮದ ನಿವಾಸಿ ಆರ್. ಪ್ರವೀಣ, ಮೈಸೂರಿನ ಬಿಎಂಶ್ರೀ ನಗರದ ಎನ್. ಶಿವಕುಮಾರ್ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿ.ಪಿ ಬೋರೆ ನಿವಾಸಿ ರಘು ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು, ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಬಂಧಿತರಿಂದ 42, 000 ರೂ ನಗದು, 2 ದ್ವಿ ಚಕ್ರ ವಾಹನ, ಮೂರು ಮೊಬೈಲ್ ಫೋನ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಐಟಿ ಉದ್ಯೋಗಿಯೊಬ್ಬರನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ ಹಣ, ಬೈಕ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.

ಮೈಸೂರು ನಗರ ಡಿಸಿಪಿ ಗೀತಾ ಪ್ರಸನ್ನ ಹಾಗೂ ನರಸಿಂಹರಾಜ ವಿಭಾಗದ ಎಸಿಪಿ ಶಿವ ಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಲ್ಲೇಶ್, ಪಿಎಸ್ ಐಗಳಾದ ವಿಶ್ವನಾಥ್ , ನಾಗರಾಜ್ ನಾಯ್ಕ್ ಸೇರಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss