ಬಳ್ಳಾರಿ: ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಲಖನೌ ಸಿಬಿಐ ನ್ಯಾಯಪೀಠ ಇದೊಂದು ಆಕಸ್ಮಿಕ ಘಟನೆ, ಪೂರ್ವ ನಿಯೋಜಿತ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲ ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿದ್ದ ಆರೋಪಿಗಳನ್ನು ನಿರ್ದೋಷಿಗಳೆಂದು ನ್ಯಾಯಾಲಯ ಐತಿಹಾಸಿಕ ತೀರ್ಪೂ ನೀಡಿರುವುದು ಸಂತಸ ಮೂಡಿಸಿದೆ ಎಂದು ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ತಿಳಿಸಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐತಿಹಾಸಿಕ ತೀರ್ಪು ನೀಡುವ ಮೂಲಕ ಸತ್ಯಕ್ಕೆ ಯಾವತ್ತಿದ್ದರೂ ಜಯ ದೊರೆಯಲಿದೆ ಎನ್ಮುವುದು ಸಾಬೀತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ ಸುದೀರ್ಘ ವಿಚಾರಣೆ ನಡೆಸಿ ಸುಖಾಂತ್ಯಗೊಳಿಸಿದ್ದಾರೆ. ತೀರ್ಪು ನ್ಯಾಯ, ಸತ್ಯದ ಪರ ಬಂದಿರುವುದು ಸಂತಸ ಮೂಡಿಸಿದೆ. ಪಕ್ಷದ ಹಿರಿಯ ನಾಯಕರು ಈ ಪ್ರಕರಣದಲ್ಲಿ ದೋಷಮುಕ್ತ ಆಗಿರುವುದು ಸಂತಸ ಮೂಡಿಸಿದೆ. ಕಾಂಗ್ರೆಸ್ ಇಂತಹ ಪ್ರಕರಣಗಳಲ್ಲಿ ತಲೆದೂರಿಸಿ ಗಲಭೆ, ಗೊಂದಲ ಸೃಷ್ಟಿ ಮಾಡುವುದು ಸಾಮಾನ್ಯವಾಗಿದೆ. ಸತ್ಯಕ್ಕೆ ಯಾವತ್ತಿದ್ದರೂ ಗೆಲವು ಇದ್ದೇ ಇರಲಿದೆ ಎಂಬುದು ನ್ಯಾಯಾಲಯ ಸಾಬೀತುಪಡಿಸಿದೆ. ಇನ್ನಾದರೂ ಕಾಂಗ್ರೆಸ್ ನವರು ಅರಿತುಕೊಳ್ಳಬೇಕು, ಕೋರ್ಟ್ ನ ತೀರ್ಪು ಸ್ವಾಗತಾರ್ಹ ಎಂದು ಹೇಳಿದ್ದಾರೆ.