Monday, July 4, 2022

Latest Posts

ಐತಿಹಾಸಿಕ ದೇಗುಲಕ್ಕೆ ಕಳ್ಳರ ಲಗ್ಗೆ: ಕಾಳಿಕಾ ದೇವಿ ಮೂರ್ತಿ ಭಗ್ನ

ಹೊಸದಿಗಂತ ವರದಿ ಹಾಸನ:

ನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡಗದ್ದವಳ್ಳಿಯ ಐತಿಹಾಸಿಕ ಕಾಳಿಕಾ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ದೇವಿಯ ವಿಗ್ರಹವನ್ನು ಭಗ್ನಗೊಳಿಸಲಾಗಿದೆ.

ನಿಧಿಗಳ್ಳರು ಗರ್ಭಗುಡಿಗೆ ನುಗ್ಗಿ‌‌ ಕಳ್ಳತನಕ್ಕೆ ಯತ್ನಿಸಿದ್ದು,ವಿಗ್ರಹ ಭಗ್ನಗೊಳಿಸಿ ಅಡಿಯಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ.

ದೊಡ್ಡಗದ್ದವಳ್ಳಿಯ ದೇಗುಲವು ಬೇಲೂರು ಹಳೆಬೀಡಿಗಿಂತಲೂ ಪುರಾತನವಾದ ದೇಗುಲದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವುದು ಭಕ್ತವಲಯದಲ್ಲಿ ಆತಂಕ ಸೃಷ್ಟಿಸಿದ್ದು,ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಹಾಸನ ಗ್ರಾಮಾಂತರ ಠಾಣೆ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss