ಮೈಸೂರು: ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಸಂಬoಧ ಮೈಸೂರಿನಲ್ಲಿ ನಡೆಯುವ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರಿಂದ ಸ್ಪೆಷಲ್ ಟೀಮ್ ರೆಡಿಯಾಗಿದೆ. ಆನ್ಲೈನ್ ಬುಕ್ಕಿಂಗ್, ಸೈಬರ್ ಸೆಂಟರ್ ಗಳ ಮೇಲೆ ಪೊಲೀಸರ ಕಣ್ಗಾವಲಿಟ್ಟಿದ್ದು, ದಂಧೆಕೋರರು ಕದ್ದುಮುಚ್ಚಿ ಹಣಕ್ಕಾಗಿ ಯುವಕರನ್ನ ಸೆಳೆಯಲು ಮುಂದಾದರೆ ತಕ್ಷಣವೇ ಆ ಬಗ್ಗೆ ಮಾಹಿತಿ ಸಿಗುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹಳೆ ಬೆಟ್ಟಿಂಗ್ ದಂಧೆಕೋರರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಡಾ. ಎ.ಪ್ರಕಾಶ್ ಗೌಡ, ಈ ಹಿಂದಿನ ಐಪಿಎಲ್ ದಂಧೆ ಪ್ರಕರಣಗಳನ್ನ ನಾವು ಗಮನಿಸುತ್ತಿದ್ದೇವೆ.ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ನಮಗೆ ಬೆಂಬಲ ಕೊಡಬೇಕು. ಕ್ರಿಕೆಟ್ ಬೆಟ್ಟಿಂಗ್ ನಡೆಯುವ ವಿಷಯ ತಿಳಿದು ಬಂದಲ್ಲಿ ನಮಗೆ ಮಾಹಿತಿ ಕೊಡಿ. ನಮಗೆ ಮಾಹಿತಿ ನೀಡುವವರ ಹೆಸರನ್ನ ಗೌಪ್ಯವಾಗಿ ಇಡಲಾಗುತ್ತೆ. ಆರೋಪಿಗಳನ್ನ ಬಂಧಿಸುತ್ತವೆ. ಇದರಿಂದ ಬೆಟ್ಟಿಂಗ್ ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ತಡೆಗಾಗಿ ಸಿಸಿಬಿ ತಂಡ ರಚಿಸಲಾಗಿದ್ದು ದಂಧೆಯಲ್ಲಿ ತೊಡಗುವವರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.