ಹೊಸದಿಲ್ಲಿ: ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ ಈ ಬಾರಿ ಐಪಿಎಲ್ ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದು ಕಷ್ಟಸಾಧ್ಯವಾಗಿದೆ.
ವಿಶ್ವಕ್ಕೆ ಹಬ್ಬಿರುವ ಕೋವಿಡ್ -19 ವೈರಸ್ ನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ವಿದೇಶಿಗರ ವೀಸಾ ಮೇಲೆ ನಿರ್ಬಂಧ ಹೇರಿದ್ದು, ಏ.15ರವರೆಗೆ ಐಪಿಎಲ್ ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನ ಎಂಬಂತಾಗಿದೆ.
ವಿದೇಶಿ ಆಟಗಾರರು ವಾಣಿಜ್ಯ (ಬ್ಯುಸಿನೆಸ್) ವೀಸಾದಡಿಯಲ್ಲಿ ಬರುವುದರಿಂದ, ಸರ್ಕಾರದ ಆದೇಶದ ಪ್ರಕಾರ ಏ.15ರ ನಂತರವೇ ಭಾರತಕ್ಕೆ ಆಗಮಿಸಬೇಕಾಗುತ್ತದೆ.
ಮಾ.29ರಿಂದ ಐಪಿಎಲ್ ಪಂದ್ಯಾವಳಿ ಆರಂಭಗೊಳ್ಳಬೇಕಿದೆ. ಮಾ.14ರಂದು ಮುಂಬೈನಲ್ಲಿ ಬಿಸಿಸಿಐ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಐಪಿಎಲ್ ಪಂದ್ಯಾವಳಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.