Wednesday, July 6, 2022

Latest Posts

ಐಪಿಎಲ್ ಗೂ ವಿದಾಯ ಹೇಳಿದ ಶೇನ್ ವ್ಯಾಟ್ಸನ್: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಅಲ್ವಿದಾ!

ಚೆನ್ನೈ: ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.  2018ರಲ್ಲಿ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ನಂಬರ್ ಒನ್ ಪಟ್ಟ ತಂದು ಕೊಟ್ಟ ಶೇನ್ ವ್ಯಾಟ್ಸನ್ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 10 ವರ್ಷಗಳ ಕಾಲ ಮೂರು ಫ್ರಾಂಚೈಸಿಗಳಲ್ಲಿ ವ್ಯಾಟ್ಸನ್​ ಆಡಿದ್ದು, 2008ರಲ್ಲಿ ಆರ್​ಆರ್​ ಹಾಗೂ 2018ರಲ್ಲಿ ಸಿಎಸ್​ಕೆ ಟ್ರೋಫಿ ಗೆದ್ದಾಗ ಆ ತಂಡಗಳ ಭಾಗವಾಗಿದ್ದರು.
ಮುಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಶೇನ್ ವ್ಯಾಟ್ಸನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿರುವುದಿಲ್ಲ ಎಂದು ಸಿಎಸ್​ಕೆ ತಿಳಿಸಿದ್ದು, ಈ ಮೂಲಕ ಅವರು ನಿವೃತ್ತಿ ಪಡೆದುಕೊಳ್ಳುವುದನ್ನು ಖಚಿತಪಡಿಸಿದೆ. ಇದರೊಂದಿಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಆರಂಭಿಕ, ಮುಂದಿನ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ 39 ವರ್ಷದ ವ್ಯಾಟ್ಸನ್, ಟಿ20 ಲೀಗ್‌ಗಳಲ್ಲಿ ಮಾತ್ರ ಆಡುತ್ತಿದ್ದರು.
ಸಿಎಸ್‌ಕೆ ತಂಡ ಭಾನುವಾರ ಐಪಿಎಲ್-13ರ ಕೊನೇ ಪಂದ್ಯ ಆಡಿದ ಬಳಿಕ ವ್ಯಾಟ್ಸನ್ ಡ್ರೆಸ್ಸಿಂಗ್ ರೂಂನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು ಮತ್ತು ತಮ್ಮ ಜೀವನದ ಕೊನೇ ಪಂದ್ಯವನ್ನು ಆಡಿ ಆಗಿದೆ ಎಂದರು. ಸಿಎಸ್‌ಕೆ ತಂಡದ ಪರ ಆಡಿದ್ದು ತಮ್ಮ ಜೀವನದ ಭಾಗ್ಯ ಎಂದೂ ವ್ಯಾಟ್ಸನ್ ಭಾವುಕರಾಗಿ ನುಡಿದರು ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.
ಈ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನಾಡಿರುವ ವ್ಯಾಟ್ಸನ್​ ಎರಡು ಅರ್ಧಶತಕ ಸೇರಿದಂತೆ 299 ರನ್​ ಗಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಸ್​ಕೆ ತಂಡದ ಮ್ಯಾನೇಜ್​ಮೆಂಟ್​​, ಈಗಾಗಲೇ ಡ್ರೆಸ್ಸಿಂಗ್​ ರೂಂನಲ್ಲಿ ವ್ಯಾಟ್ಸನ್ ಇದರ ಬಗ್ಗೆ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾಗೆ ಹೋದ ತಕ್ಷಣ ನಿವೃತ್ತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss