ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಫೆಬ್ರವರಿ 16ರಂದು 2021ರ ಐಪಿಎಲ್ಗೆ ಮಿನಿ ಹರಾಜು ನಡೆಯುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಫೆಬ್ರವರಿ 4ರೊಳಗೆ ಫ್ರಾಂಚೈಸಿ ಕೈಬಿಟ್ಟ ಆಟಗಾರರು ಸೇರಿದಂತೆ ಎಲ್ಲಾ ರಾಜ್ಯದ ಕ್ರಿಕೆಟಿಗರು ಹರಾಜಿನಲ್ಲಿ ತಮ್ಮ ಹೆಸರನ್ನು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
ಇನ್ನು ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಜನವರಿ 20 ಕೊನೆಯ ದಿನಾಂಕವಾಗಿದ್ದು, ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಸೂಚನೆ ನೀಡಿದೆ.
ಇದರ ಜೊತೆಗೆ ಹೊಸ ಆಟಗಾರರಿಗೆ 2021ರ ಹರಾಜಿಗೆ ಫೆಬ್ರವರಿ 4ರೊಳಗೆ ಹೆಸರನ್ನು ನೋಂದಾಯಿಸಲು ಅವಕಾಶವಿದ್ದು, ಇನ್ನು ಮೂಲ ದಾಖಲೆಗಳನ್ನು ಫೆಬ್ರವರಿ 12ರ ಒಳಗಾಗಿ ಸಲ್ಲಿಸಲು ಗಡುವು ನೀಡಲಾಗಿದೆ.
ಈ ಸಂಬಂಧ ಬಿಸಿಸಿಐ ಎಲ್ಲಾ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ಗಳಿಗೆ ಮೇಲ್ ಕಳುಹಿಸಿದೆ. ಅಲ್ಲದೆ ಆಟಗಾರರು ಕ್ರಿಕೆಟ್ ಅಸೋಸಿಯೇಷನ್ ಜೊತೆಗೆ ಮಾತ್ರ ಸಂವಹನ ನಡೆಸಬೇಕಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಬೇಕೆಂಬ ಆಟಗಾರರು ತಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೂಲಕವೇ ತಮ್ಮ ಹೆಸರನ್ನು ಕಳುಹಿಸಿಕೊಡಬೇಕೆಂದು ಬಿಸಿಸಿಐ ತಿಳಿಸಿದೆ.