ಹೊಸದಿಲ್ಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದೆ. ಒಂದೆಡೆ ಕಠಿಣ ಅಭ್ಯಾಸ ಮತ್ತೊಂದೆಡೆ ಮೋಜು ಮಸ್ತಿಯೊಂದಿಗೆ ಆಟಗಾರರು ಸಮಯ ಕಳೆಯುತ್ತಿದ್ದಾರೆ.
ಸರಣಿಗೆ ಮುಂಬೈ ಇಂಡಿಯನ್ಸ್ ಸಜ್ಜಾಗುತ್ತಿದ್ದು, ಆದರೆ ಈ ವೇಳೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡ್ರಾ? ಎಂಬ ಚರ್ಚೆ ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ.
ಈ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಅರ್ಜುನ್ ತೆಂಡುಲ್ಕರ್ ಐಪಿಎಲ್ 13ನೇ ಆವೃತ್ತಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯುವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಲ್ಲದೆ 20ರ ಹರೆಯದ ಅರ್ಜುನ್ ರೋಹಿತ್ ಪಡೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.ಆದರೆ ಈಗ ಅರ್ಜುನ್ ಮುಂಬೈ ತಂಡದಲ್ಲಿ ಸ್ಥಾನ ಪಡೆದಿರುವುದು ನೆಟ್ ಬೌಲರ್ ಆಗಿ ಎಂಬ ವಿಚಾರ ಬಹಿರಂಗವಾಗಿದೆ.ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲಿ ತಂಡಕ್ಕೆ ಅಭ್ಯಾಸದ ವೇಳೆ ನೆಟ್ ಬೌಲರ್ ಆಗಿ ನೆರವಾಗುತ್ತ ಬಂದಿದ್ದಾರೆ.
2018ರಲ್ಲಿ ಭಾರತ ತಂಡದ ಪರ 19 ವಯೋಮಿತಿ ಕ್ರಿಕೆಟ್ ಪಂದ್ಯ ಆಡಿದ್ದ ಅರ್ಜುನ್ ಮುಂಬೈ ಇಂಡಿಯನ್ಸ್ ತಂಡದ ಜತೆಗೆ ಗುರುತಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಪ್ಪ ಸಚಿನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕರಾಗಿದ್ದಾಗ ಪಂದ್ಯಗಳನ್ನು ನೋಡಲು ಬರುತ್ತಿದ್ದ ಅರ್ಜುನ್, ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲಿ ತಂಡಕ್ಕೆ ಅಭ್ಯಾಸದ ವೇಳೆ ನೆಟ್ ಬೌಲರ್ ಆಗಿ ನೆರವಾಗುತ್ತ ಬಂದಿದ್ದಾರೆ. ಇದೀಗ ಯುಎಇಗೆ ಮುಂಬೈ ತಂಡ ಕರೆದೊಯ್ದಿರುವ ಕೆಲ ನೆಟ್ ಬೌಲರ್ಗಳಲ್ಲಿ ಅರ್ಜುನ್ ಕೂಡ ಒಬ್ಬರಾಗಿದ್ದಾರೆ.