Monday, July 4, 2022

Latest Posts

ಐಬಿಎಂನ ಸಿಇಓ ಆಗಿ ಭಾರತೀಯ ಮೂಲದ ಅರವಿಂದ್ ಕೃಷ್ಣ ಆಯ್ಕೆ

ನ್ಯೂಯಾರ್ಕ್: ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂನ ನೂತನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಭಾರತೀಯ ಮೂಲದ ಅರವಿಂದ್ ಕೃಷ್ಣ ಆಯ್ಕೆಯಾಗಿದ್ದಾರೆ.

ಸದ್ಯ ಅರವಿಂದ್ ಕೃಷ್ಣ ಅವರು ಸಂಸ್ಥೆಯ ಕ್ಲೌಡ್ ಮತ್ತು ಕಾಗ್ನೆಟಿವ್ ಯುನಿಟ್ ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏ.6ರಂದು ಅರವಿಂದ್ ಕೃಷ್ಣ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಐಬಿಎಂನ ನೂತನ ಸಿಇಓ ಆಗಿ ಆಯ್ಕೆಯಾಗಿರುವ ಅರವಿಂದ್ ಕೃಷ್ಣ ಅವರು ಕಾನ್ಪುರದ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಇಲಿಯಾನ್ಸ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

ಸದ್ಯ ಐಬಿಎಂನ ಸಿಇಓ ಆಗಿರುವ ವರ್ಜೀನಿಯಾ ರೊಮೆಟಿ ಈ ವರ್ಷದ ಅಂತ್ಯದವರೆಗೂ ಮುಂದುವರಿಯಲಿದ್ದಾರೆ. ಸುಮಾರು 40 ವರ್ಷಗಳಿಂದ ಐಬಿಎಂನಲ್ಲಿ ಸೇವೆ ಸಲ್ಲಿಸಿರುವ ರೊಮೆಟಿ ಈ ವರ್ಷಾಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss