ಐಬಿಎಂ-ಎಚ್ ಪಿಇ ಕಂಪನಿಗಳಲ್ಲಿ ಉದ್ಯೋಗ ಕಡಿತ, ಬೀದಿಗೆ ಬರಲಿದ್ದಾರೆ ಲಕ್ಷಾಂತರ ನೌಕರರು!

0
200

ಸ್ಯಾನ್ ಫ್ರಾನ್ಸಿಸ್ಕೊ: ಕೊರೋನಾ ಮಹಾಮಾರಿಗೆ ಇಡೀ ವಿಶ್ವವೇ ತತ್ತರಿಸಿದ್ದು, ಅನೇಕ ಉದ್ಯಮ, ವ್ಯಾಪಾರ, ವ್ಯವಹಾರಗಳು ನೆಲಕಚ್ಚಿವೆ. ಫೇಸ್ ಬುಕ್ ತನ್ನ ಅರ್ಧದಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟದ್ದೇ ತಡ ಅನೇಕ ಸಾಫ್ಟ್‌ವೇರ್ ಕಂಪನಿಗಳು ಈ ದಾರಿಯನ್ನು ಹಿಡಿದಿವೆ. ಇದೀಗ ಐಬಿಎಂ ,ಎಚ್ ಪಿಇ ಕಂಪನಿಗಳು ಉದ್ಯೋಗ ಕಡಿತ ಮಾಡುವ ಗುಟ್ಟನ್ನು ಬಿಟ್ಟುಕೊಟ್ಟಿವೆ. ಐಬಿಎಮ್ ಶುಕ್ರವಾರ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಕೋವಿಡ್ ನಿಂದಾಗಿ ಕಂಪನಿಗಳ ವ್ಯವಹಾರದಲ್ಲಿ ಹೆಚ್ಚು ನಷ್ಟವಾಗಿದೆ. ಅಲ್ಲದೇ ಕಂಪನಿಯ ಭವಿಷ್ಯದ ದೃಷ್ಟಿಯಲ್ಲಿ ಉದ್ಯೋಗ ಕಡಿತ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಂಬಳ ವನ್ನು ಕಡಿತ ಮಾಡಲಾಗುತ್ತಿದ್ದು ಕಂಪನಿಯು ಹೊಸ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಎದುರು ನೋಡುತ್ತಿದೆ. ಜಾಗತಿಕವಾಗಿ ಹೆಚ್ಚು ಸ್ಪರ್ಧೆ ಇರುವುದರಿಂದ ಕಂಪನಿಯ ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದಿದೆ.
ಎಚ್ ಪಿಇ ಕಂಪನಿ  ‌ನೌಕರರ ಸಂಬಳ ಕಡಿತ ಮಾಡುವುದಾಗಿ ಹೇಳಿದ್ದು 20% ರಿಂದ 25% ರಷ್ಟು ಸಂಬಳ ಕಡಿತ ಮಾಡುವುದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here