spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಸಿಸಿ ಟಿ-20 ವಿಶ್ವಕಪ್: ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ!

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್​​ 17ರಿಂದ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಭಾಗಿಯಾಗುವ ತಂಡಗಳು ಈಗಾಗಲೇ ಹೊಸ ಜೆರ್ಸಿ ರಿವೀಲ್​ ಮಾಡಿತ್ತಿದ್ದು, ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ತನ್ನ ಜೆರ್ನಿ ಅನಾವರಣ ಮಾಡಿದೆ.
ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ, ಉಪನಾಯಕ ರೋಹಿತ್​ ಶರ್ಮಾ, ಕೆ ಎಲ್​ ರಾಹುಲ್​, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್​ ಬುಮ್ರಾ ಮಿಂಚಿದ್ದಾರೆ. ನೂತನ ಜೆರ್ಸಿಗೆ ‘ಬಿಲಿಯನ್​ ಚೀರ್ಸ್​​ ಜೆರ್ಸಿ’ ಎಂದು ಹೆಸರಿಡಲಾಗಿದೆ. ಈ ಜೆರ್ಸಿ ಬಹುತೇಕ 1992ರ ವಿಶ್ವಕಪ್​ ಮಾದರಿಯಲ್ಲಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ಮಂಡಳಿ ಟ್ವೀಟ್ ಮಾಡಿದ್ದು, ಬಿಲಿಯನ್​ ಚೀರ್ಸ್​ ಜೆರ್ಸಿ ಅನಾವರಣ ಮಾಡಲಾಗುತ್ತಿದ್ದು, ಇದಕ್ಕಾಗಿ ಶತಕೋಟಿ ಅಭಿಮಾನಿಗಳಿಂದ ಸ್ಫೂರ್ತಿ ಪಡೆದಿದ್ದೇವೆ ಎಂದಿದೆ. ಈ ಟೂರ್ನಿಯಲ್ಲಿ ಭಾರತ ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭ ಮಾಡಲಿದೆ.
ಈ ಜರ್ಸಿ ಕೂಡ ಒಂದೇ ಬಣ್ಣದ್ದಾಗಿದೆ. ದಿಯಾನ್ ಮಾತ್ರ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿ ನೀಡಲಾಗಿದೆ. ಹಿಂದಿನ ಜೆರ್ಸಿಯಲ್ಲಿ ಭುಜದ ಮೇಲೆ ತ್ರಿವರ್ಣ ಇತ್ತು.
ಕೈಗೆಟ್ಟುಕುವ ದರದಲ್ಲಿ ಟೀಂ ಇಂಡಿಯಾ ಜರ್ಸಿ :
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿ ಅಭಿಮಾನಿಗಳಿಗೆ ಲಭ್ಯವಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹೊಸ ಜೆರ್ಸಿ ಜತೆಗೆ ಕ್ರೀಡಾಭಿಮಾನಿಗಳ ಪ್ರೀತಿ ಗಳಿಸಲು ನಾವು ವೈವಿಧ್ಯಮಯ ಹೊಸ ವಸ್ತು ಸಹ ಆರಂಭ ಮಾಡುತ್ತೇವೆ ಎಂದು ಎಂಪಿಎಲ್​​ ಸ್ಪೋರ್ಟ್ಸ್​​ ಮುಖ್ಯಸ್ಥ ಶೋಭಿತ್​ ಗುಪ್ತಾ ತಿಳಿಸಿದ್ದಾರೆ. ಬರುವ ಶುಕ್ರವಾರದಿಂದ ಹೊಸ ಜೆರ್ಸಿ ಖರೀದಿ ಮಾಡಲು ಬುಕ್ಕಿಂಗ್​ ಆರಂಭಗೊಳ್ಳಲಿದೆ. ಅಭಿಮಾನಿಗಳು ಇಲ್ಲಿ ಜೆರ್ಸಿ ಖರೀದಿ ಮಾಡಬಹುದಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss