ಹೊಸದಿಲ್ಲಿ: ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ವತಿಯಿಂದ ಆಯೋಜಿಸಿರುವ ‘ಐ ಆಮ್ ಬ್ಯಾಡ್ಮಿಂಟನ್’ ಎಂಬ ಕಾರ್ಯಕ್ರಮಕ್ಕೆ ಭಾರತದ ಪಿವಿ ಸಿಂಧು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಯಾವುದೇ ಕ್ರೀಡೆಯಲ್ಲಿ ಅಪವಾದ ಬರದ ರೀತಿಯಲ್ಲಿ ಆಡುವುದು ಆಟಗಾರರಿಗೆ ಮುಖ್ಯವಾಗುತ್ತದೆ. ಈ ರೀತಿಯ ಸಂದೇಶ ನೀಡುವ ಕಾರ್ಯಕ್ರಮಕ್ಕೆ ನಾವೆಲ್ಲಾ ರಾಯಭಾರಿಗಳು ಜೊತೆಯಾಗುತ್ತಿದ್ದೇವೆ ಎಂದು ಪಿ.ವಿ.ಸಿಂಧು ಹೇಳಿದರು.
ಈ ಭಾರಿಯ ಕಾರ್ಯಕ್ರಮದಲ್ಲಿ ಚೀನಾದ ಜೆಂಗ್ ಶೀ ವೀ, ಇಂಗ್ಲೆಂಡ್ ನ ಜ್ಯಾಕ್ ಶೆಫರ್ಡ್, ಜರ್ಮನಿಯ ವಲ್ಲೆಸ್ಕಾ ಸೇರಿದಂತೆ ಇನ್ನಿತರೆ ಆಟಗಾರರು ಜೊತೆಯಾಗಿದ್ದಾರೆ.