ಅತ್ರಾಸ ಮಾಡುವುದು ಸ್ವಲ್ಪ ಕಷ್ಟವಾದರೂ ಮಾಡಿಟ್ಟುಕೊಂಡರೆ ಒಂದು ತಿಂಗಳವರೆಗೂ ಫ್ರೆಶ್ ಇರುತ್ತದೆ. ಇದು ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಹೇಗೆ ಮಾಡುವುದು ನೋಡಿ.
ಬೇಕಾಗುವ ಸಾಮಗ್ರಿ:
1.25 ಅಕ್ಕಿ
1 ಕಪ್ ಬೆಲ್ಲ
1|4 ನೀರು
5 ಚಮಚ ತುಪ್ಪ
2 ಚಮಚ ಬಿಳಿ ಎಳ್ಳು
ಕರಿಯಲು ಎಣ್ಣೆ
ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 2 ಗಂಟೆ ನೆನೆಸಿಡಿ.
- ನಂತರ ಅದನ್ನು ಆರಲು ಬಿಡಿ.
- ಆರಿದ ನಂತರ ಏಲಕ್ಕಿ ಪುಡಿಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
- ನಂತರ 3 ಕಪ್ ನಷ್ಟು ನೀರು ತೆಗೆದುಕೊಂಡು ಅದಕ್ಕೆ ಬೆಲ್ಲ, ಮತ್ತು ಪುಡಿ ಮಾಡಿಕೊಂಡ ಅಕ್ಕಿ ಹಿಟ್ಟು ಹಾಕಿ ಕುದಿಸಿ.
- ಉಂಡೆ ಕಟ್ಟವ ಹದಕ್ಕೆ ಬರುವವರೆಗೂ ತಳ ಹಿಡಿಯದಂತೆ ನೋಡಿಕೊಂಡು ಕುದಿಸಿ.
- ನಂತರ ಸ್ವಲ್ಪ ತಣ್ಣಗಾದಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಆ ಹಿಟ್ಟನ್ನು ಪಾತ್ರೆಯಲ್ಲಿ ಮುಚ್ಚಿಡಿ.
- ನಂತರ ಸಣ್ಣ ಗಾತ್ರದಲ್ಲಿ ಉಂಡೆ ಮಾಡಿಕೊಂಡು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಪೇಪರ್ ಮೇಲೆ ತಟ್ಟಿ ಚಿಕ್ಕ ರೊಟ್ಟಿ ರೀತಿ ಮಾಡಿಕೊಳ್ಳಿ.
- ಸರಿಯಾಗಿ ಕಾದ ಎಣ್ಣೆಯಲ್ಲಿ ಕರಿದರೆ ಅತ್ರಾಸ ರೆಡಿ.