Wednesday, June 29, 2022

Latest Posts

“ಒಂದು ವಾರ ಹೋಂ ಕ್ವಾರಂಟೈನ್‌ನಲ್ಲಿರುತ್ತೇನೆ” ಯಾರೂ ನನ್ನನ್ನು ಭೇಟಿ ಮಾಡಬೇಡಿ: ಡಿಕೆಶಿ ಮನವಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ವಾರ ಯಾರು ನನ್ನನ್ನು ಭೇಟಿ ಮಾಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ ಮತ್ತು ವಿಡಿಯೋ ಮೂಲಕವೂ ಮನವಿ ಮಾಡಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇರಬೇಕಾಗಿದೆ. ಈ ವೇಳೆಯಲ್ಲಿ ನನ್ನನ್ನು ಭೇಟಿಯಾಗಲು ಯಾರೂ ಪ್ರಯತ್ನಿಸುವುದು ಬೇಡ. ನನ್ನ ಆರೋಗ್ಯ ಸುಧಾರಣೆಗೆ ಹಾರೈಸಿದ ತಮಗೆಲ್ಲ ಕೋಟಿ ಕೋಟಿ ನಮನಗಳು. ನೀವು ತೋರಿಸಿದ ಪ್ರೀತಿ, ಅಭಿಮಾನ ನನಗೆ ಶಕ್ತಿ ತಂದಿದೆ. ಹಾಗಾಗಿ ಇನ್ನು ಒಂದು ವಾರಗಳ ಕಾಲ ತಾವೆಲ್ಲಾ ಸಹಕಾರ ನೀಡಬೇಕು ಎ0ದು ಮನವಿ ಮಾಡಿಕೊಂಡಿದ್ದಾರೆ.

ಪಕ್ಷದ ‌ಎಲ್ಲಾ ಕಾರ್ಯಕರ್ತರು, ನಾಯಕರು, ಅಭಿಮಾನಿಗಳು, ಸ್ನೇಹಿತರ, ತಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆರೋಗ್ಯ‌ ಸಾಕಷ್ಟು ಸುಧಾರಿಸಿದೆ.  ವೈದ್ಯರ ಸಲಹೆಯಂತೆ ಒಂದು ವಾರ ವಿಶ್ರಾಂತಿ ಪಡೆಯಬೇಕಿದ್ದು, ಈ ವೇಳೆ ಯಾರನ್ನೂ ಭೇಟಿಯಾಗದಂತೆ ಸೂಚಿಸಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss