ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ಕುಟುಂಬದ ಸೋದರ ಸಂಬಂಧಿಗಳ ನಡುವೆ ಇಲ್ಲ ಮದುವೆಯ ಭಾಗ್ಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿವಾಹ ಕುರಿತು ಹರಿಯಾಣ ಮತ್ತು ಪಂಜಾಬ್​ ಹೈ ಕೋರ್ಟ್ ನಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಒಂದೇ ಕುಟುಂಬದ ಸೋದರ ಸಂಬಂಧಿಗಳು (ಕಸಿನ್ಸ್​) ಮದುವೆಯಾಗುವುದು ಕಾನೂನು ಬಾಹಿರ ಎಂದು ಕೋರ್ಟ್​ ಆದೇಶ ನೀಡಿದೆ.
21 ವರ್ಷದ ಯುವಕನೋರ್ವ ತನ್ನ ಸೋದರ ಸಂಬಂಧಿ ಯುವತಿಯನ್ನು ಮದುವೆಯಾಗುವ ವಿಚಾರದಲ್ಲಿ ಹೈ ಕೋರ್ಟ್​ ಮೆಟ್ಟಿಲೇರಿ, ಅರ್ಜಿಯನ್ನು ಸಲ್ಲಿಸಿದ್ದಾನೆ.
ಯುವತಿಯ ಅಪ್ಪ ಮತ್ತು ಯುವಕನ ಅಪ್ಪ ಇಬ್ಬರು ಅಣ್ಣ ತಮ್ಮಂದಿರು. ಯುವತಿಯ ಮನೆಯಲ್ಲಿ ಆಕೆಗಿಂತ ಆಕೆಯ ಸಹೋದರನನ್ನು ಕಂಡರೆ ಹೆಚ್ಚು ಪ್ರೀತಿಯಂತೆ. ಅದೇ ಕಾರಣದಿಂದ ಮನನೊಂದ ಯುವತಿ ಸೋದರ ಸಂಬಂಧಿಯೊಡನೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾಳೆ. ಆಕೆಗೆ 18 ವರ್ಷ ತುಂಬಿದ ನಂತರ ತಾನು ಅವಳನ್ನು ಮದುವೆಯಾಗುತ್ತೇನೆ. ಅಲ್ಲಿಯವರೆಗೆ ನಮ್ಮ ಕುಟುಂಬದವರಿಂದ ನಮಗೆ ರಕ್ಷಣೆ ಕೊಡಿ ಎಂದು ಯುವಕ ಅರ್ಜಿಯಲ್ಲಿ ತಿಳಿಸಿದ್ದಾನೆ.
ಇನ್ನು ಈ ಸಂಬಂಧ ಎರಡು ಎರಡು ಕುಟುಂಬಗಳು ಕೂಡ ನ್ಯಾಯಾಲಯದ ಮೆಟ್ಟಿಲೇರಿವೆ. ಅವರಿಬ್ಬರ ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ದೂರಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕುಟುಂಬಸ್ಥರ ಪರವಾಗಿ ತೀರ್ಪು ನೀಡಿದೆ.
ಕಾನೂನಿನಲ್ಲಿ ಒಂದೇ ಕುಟುಂಬದ ಮೊದಲ ಸೋದರ ಸಂಬಂಧಿಗಳು (ಅಣ್ಣ ತಮ್ಮಂದಿರ ಮಕ್ಕಳು) ಮದುವೆಯಾಗುವುದಕ್ಕೆ ಅವಕಾಶವಿಲ್ಲ. ಹಾಗಿದ್ದಾಗ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿರುವುದು ಕೂಡ ತಪ್ಪಾಗುತ್ತದೆ. ಅದೂ ಅಲ್ಲದೆ ಯುವತಿಗೆ 18 ವರ್ಷ ತುಂಬದ ಕಾರಣ ಆಕೆಯನ್ನು ಅಪ್ರಾಪ್ತೆ ಎಂದು ಪರಿಗಣಿಸಲಾಗುತ್ತದೆ. ಅವಳ ಮದುವೆ ವಿಚಾರದಲ್ಲಿ ಅರ್ಜಿ ಸಲ್ಲಿಕೆ ಕೂಡ ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss