Wednesday, July 6, 2022

Latest Posts

ಒಂದೇ ದಿನ 18,552 ಕೊರೋನಾ ಸೋಂಕಿತ ಪ್ರಕರಣಗಳು: ದೇಶದಲ್ಲಿ ದಾಖಲೆಯ 5 ಲಕ್ಷ ಸೋಂಕಿತರು

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಾಖಲೆಯ 5 ಲಕ್ಷ ಗಡಿದಾಟಿದೆ. ಕಳೆದ 24 ಗಂಟೆಗಳಲ್ಲಿ 18,552 ಕೊರೋನಾ ಸೋಂಕಿತರು ವರದಿಯಾಗಿದ್ದಾರೆ.

ಡೆಡ್ಲಿ ಕೊರೋನಾಗೆ ಕಳೆದ 24 ಗಂಟೆಗಳಲ್ಲಿ 384 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೋವಿಡ್-19 ನಿಂದ 1,97,387 ಸಕ್ರಿಯ ಸೋಂಕಿತರಾಗಿದ್ದು, ಒಟ್ಟಾರೆ 5,08,953 ಮಂದಿ ಕೊರೋನಾ ಸೋಂಕಿತರು ವರದಿಯಾಗಿದ್ದಾರೆ.

ಭಾರತದಲ್ಲಿ 2,95,881 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ ದೇಶದಲ್ಲಿ 15,685 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss