Sunday, June 26, 2022

Latest Posts

‘ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112’ ತುರ್ತು ಸ್ಪಂದನೆಯ ವಾಹನಗಳಿಗೆ ಎಸ್ಪಿ ಶ್ರೀಧರ್ ಚಾಲನೆ  

ಹೊಸ ದಿಗಂತ ವರದಿ, ಕೊಪ್ಪಳ:

ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ  ‘ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112’ ತುರ್ತು ಸ್ಪಂದನೆಯ ವಾಹನಗಳಿಗೆ   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್  ಅವರು ಅಧೀಕೃತ ಚಾಲನೆ ನೀಡಿದರು.
ಅವರು ಮಂಗಳವಾರ ಸಂಜೆ ನಗರದ ಅಶೋಕ ವೃತ್ತದಲ್ಲಿ ಎಲ್ಲಾ  ವಾಹನಗಳಿಗೆ ವಿಶೇಷ ಪೂಜೆ ಮಾಡುವುದರ ಮೂಲಕ  ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ಮಹಿಳೆಯರು, ನೊಂದವರು, ಹಿರಿಯ ನಾಗರಿಕರು ತಮ್ಮ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಯಾವುದೇ ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ 112 ಸಂಖ್ಯೆಗೆ ಕರೆ ಮಡುವುದರ ಮೂಲಕ, 112 ಸಂಖ್ಯೆಗೆ ಸಂದೇಶ (ಎಸ್.ಎಮ್.ಎಸ್) ರವಾನಿಸುವುದರ ಮೂಲಕ ಸಹಾಯ ಕೋರಬಹುದು ಎಂದರು.
ಅದೇ ರೀತಿ ಕರ್ತವ್ಯಕ್ಕೆ ಒಟ್ಟ್ಟು 7 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಾಹನದಲ್ಲಿ 3 ಜನ ಅಧಿಕಾರಿ/ ಸಿಬ್ಬಂದಿಯವರು (24*7) ಕರ್ತವ್ಯ ನಿರ್ವಹಿಸುವರು.  ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ಮನವಿಸಿದರು.
ಈ ಸಂದರ್ಭದಲ್ಲಿ ಡಿಎಆರ್ ಡಿವೈಎಸ್ಪಿ, ಶಶಿಧರ, ರವಿ ಉಕ್ಕುಂದ, ಪಿಎಸ್ಐ ಗಳಾದ ಮಾರುತಿ ಬುಳ್ಳಾರಿ, ಮೌನೇಶ್ವರ ಪಾಟೀಲ್, ಅಮರೇಶ ಹುಬ್ಬಳ್ಳಿ, ವೇಂಕಟೇಶ ಮಲ್ಲನಗೌಡ, ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss