ಒಂದೇ ರೀತಿ ದೋಸೆ ತಿಂದು ತಿಂದು ಬೋರ್ ಬಂದಿರತ್ತೆ. ಬೇರೆ ಏನಾದ್ರೂ ಹೊಸ ರೀತಿ ದೋಸೆ ಮಾಡೋಣ ಅಂದ್ರೆ ಯಾವುದು ಮಾಡೋದಕ್ಕೆ ಬರೋದಿಲ್ಲ ಅಲ್ವಾ. ಹಾಗಿದ್ರೆ ಈ ಈಸಿ ಬಾಳೆಹಣ್ಣಿನ ದೋಸೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿ:
ಅಕ್ಕಿ
ಬಾಳೆ ಹಣ್ಣು
ಬೆಲ್ಲ
ಉದ್ದಿನ ಬೇಳೆ
ಅವಲಕ್ಕಿ
ಉಪ್ಪು
ಮಾಡುವ ವಿಧಾನ:
ಮೊದಲಿಗೆ ಅಕ್ಕಿ, ಉದ್ದಿನ ಬೇಳೆ ಯನ್ನು 5 ಗಂಟೆ ನೀರಿನಲ್ಲಿ ನೆನೆ ಹಾಕಿ.
ನಂತರ ನೆನೆ ಹಾಕಿರುವ ಅಕ್ಕಿ, ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಹಾಕಿ ರುಬ್ಬಿಕೊಳ್ಳಿ.
ರುಬ್ಬಿಕೊಂಡಿರುವ ದೋಸೆ ಹಿಟ್ಟಿಗೆ ಉಪ್ಪು ಹಾಕಿ ಮುಚ್ಚಿಡಿ. ಇದನ್ನು 5 ಗಂಟೆ ಬಿಟ್ಟು ದೋಸೆ ಮಾಡಿಕೊಂಡು ತಿನ್ನಿ.