ಯಾವಾಗಲು ಒಂದೇ ರೀತಿ ರೊಟ್ಟಿ ತಿಂದು ನಿಮಗೂ ಬೇಜಾರಾಗಿರುತ್ತೆ. ಮಾಡುವವರಿಗೂ ಬೇಸರವಾಗಿರುತ್ತದೆ. ನೀವೇಕೆ ಮಸಾಲ ರೊಟ್ಟಿ ಮಾಡಬಾರದು? ಮಾಡಬಹುದು ಆದರೆ ಹೇಗೆ ಮಾಡೋದು ಅಂತ ಚಿಂತೆ ಅಲ್ವಾ. ಮಸಾಲ ರೊಟ್ಟಿ ಸುಲಭವಾಗಿ ಹೇಗೆ ಮಾಡುವುದು ಇಲ್ಲಿದೆ ನೋಡಿ…
ಬೇಕಾಗುವ ಸಾಮಗ್ರಿ:
ಗೋಧಿ ಹಿಟ್ಟು
ತುಪ್ಪ
ಕ್ಯಾರೆಟ್
ಹಸಿಮೆಣಸು
ಈರುಳ್ಳಿ
ಉಪ್ಪು
ಸಕ್ಕರೆ
ನೀರು
ಕೊತ್ತಂಬರಿ ಸೊಪ್ಪು
ಕರಿ ಬೇವು
ಮೆಣಸಿನ ಪುಡಿ
ಮಾಡುವ ವಿಧಾನ:
ಮೊದಲಿಗೆ ಬಿಸಿ ಬಿಸಿ ನೀರಿಗೆ ಗೋಧಿ ಹಿಟ್ಟು, ತುಪ್ಪ, ಉಪ್ಪು, ಸಕ್ಕರೆ ಹಾಕಿ ಕಲಸಿಕೊಳ್ಳಿ.
ಕಲಸಿಕೊಂಡ ಗೋಧಿ ಹಿಟ್ಟಿಗೆ ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು ಹಾಕಿ. ಆಮೇಲೆ ಮೆಣಸಿನ ಪುಡಿ ಹಾಕಿ ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿಕೊಂಡು ಉಂಡೆ ಮಾಡಿಕೊಳ್ಳಿ. ಅದನ್ನು ಲಟ್ಟಿಸಿ ಬೇಯಿಸಿ. ಬೇಕಿದ್ದಲಿ ಎಣ್ಣೆ ಹಾಕಿಯೂ ಬೇಯಿಸಿಕೊಳ್ಳಬಹುದು. ಇದನ್ನು ಚಟ್ನಿ ಜೊತೆ ಸೇವಿಸಬಹುದು. ಹಾಗೆಯೂ ತಿನ್ನಬಹುದು.