Saturday, August 13, 2022

Latest Posts

ಒಡಿಶಾದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಪೈಲೆಟ್ ಗಳ ದಾರುಣ ಸಾವು

ಒಡಿಶಾ: ಸೋಮವಾರ ಬೆಳಿಗ್ಗೆ ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ. ಒಡಿಶಾ ಜಿಲ್ಲೆಯ ಕಂಕದಾಹದ ಬೀರಸಲದಲ್ಲಿರುವ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಗೆ ಸೇರಿದ ಈ ತರಬೇತಿ ವಿಮಾನ ಪ್ರತಿಕೂಲ ಹವಾಮಾನ ಅಥವಾ ತರಬೇತಿ ವೇಳೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಪರಿಣಾಮ ಪತನವಾಗಿದೆ ಎಂದು ಶಂಕಿಸಲಾಗಿದೆ. ಮೃತಪಟ್ಟ ಪೈಲಟ್ ಗಳು ಬಿಹಾರ ಮತ್ತು ತಮಿಳುನಾಡು ಮೂಲದವರು ಎಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss