Wednesday, August 10, 2022

Latest Posts

ಒಣ ಕೆಮ್ಮಿನಿಂದ ಬೇಸತ್ತಿದ್ದೀರಾ? ಹಾಗಾದರೆ ಈ ಮನೆಮದ್ದುಗಳನ್ನು ಖಂಡಿತಾ ಟ್ರೈ ಮಾಡಿ..

ಕೊರೋನಾ ಇಲ್ಲದಿದ್ದರೆ ಮಳೆಗಾಲ, ಚಳಿಗಾಲ ಎಷ್ಟು ಸುಂದರವಾಗಿರುತ್ತಿತ್ತು ಅಲ್ಲವಾ? ನಿಮ್ಮ ಸ್ನೇಹಿತರ ಅಥವಾ ಮನೆಯವರ ಜೊತೆ ಟ್ರಿಪ್, ಮದುವೆ ಸಂಭ್ರಮ. ಅವರಿವರ ಮನೆಗೆ ಸುತ್ತಾಟ, ಸ್ನೇಹಿತರ ಜೊತೆ ಆಟ. ಆದರೆ ಈಗ ಮಳೆಯ ಒಂದು ಹನಿ ನನ್ನ ತಲೆ ಮೇಲೆ ಬಿದ್ದರೆ ಎಲ್ಲಿ ಶೀತವಾಗುತ್ತದೋ ಎನ್ನುವ ಭಯ. ಬರೀ ಶೀತ ಆದರೆ ಹೀಗೆ ಬಂದು ಹಾಗೇ ಹೋಗುತ್ತದೆ ಎನ್ನಬಹುದು. ಅದೇ ವಾರವಾದರೂ ಶೀತ ಹೋಗದಿದ್ದರೆ? ಜೊತೆಗೆ ಕೆಮ್ಮು ಬಂದುಬಿಟ್ಟರೆ? ಅದರಲ್ಲೂ ಡ್ರೈ ಕೆಮ್ಮು, ನಿಮ್ಮ ಶ್ವಾಸವೇ ಹೊರಬರುತ್ತದೆ ಎನ್ನುವ ಭಾವನೆ ನೀಡುತ್ತದೆ. ಒಣ ಕೆಮ್ಮು ಏಕೆ ಬರುತ್ತದೆ? ಅದಕ್ಕೇನು ಮಾಡುವುದು ?
ಈಗ ಥಂಡಿಯದ್ದೇ ಸೀಸನ್, ಕಫ ಸಮೇತ ಬರುವ ಕೆಮ್ಮು ಕ್ರಮೇಣ ಒಣ ಕೆಮ್ಮಾಗುತ್ತದೆ. ಇದಕ್ಕೆ ವೈದ್ಯರ ಬಳಿ ತೋರಿಸಿದರೆ ಸರಿ, ಇಲ್ಲಾ ಮನೆಯಲ್ಲೇ ಮದ್ದು ಮಾಡುತ್ತೇವೆ ಎಂದರೆ ಇಲ್ಲಿದೆ ಮನೆಮದ್ದು.

  • ಮೆಂಥಾಲ್ ಕಾಫ್ ಡ್ರಾಪ್ಸ್: ಇದು ಎಲ್ಲ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರಲ್ಲಿರುವ ಮಿಂಟ್ ಅಂಶ, ಕೂಲಿಂಗ್ ಎಫೆಕ್ಟ್ ನೀಡುತ್ತದೆ. ಇದು ಇರಿಟೇಟ್ ಆಗಿರುವ ಟಿಶ್ಯೂ ಹಾಗೂ ಕಾಫ್ ರಿಫ್ಲೆಕ್ಸನನ್ನು ತಂಪು ಮಾಡುತ್ತವೆ.
  • ಹ್ಯುಮಿಡಿಫೈರ್: ವಾತಾವರಣದಲ್ಲಿ ಮಾಯಿಸ್ಟ್ ತರುವ ಸಾಧನ ಹ್ಯುಮಿಡಿಫೈರ್. ಮನೆಯಲ್ಲಿರುವ ಡ್ರೈ ಏರ್‌ನಿಂದಾಗಿಯೂ ಕೆಮ್ಮು ಹೆಚ್ಚುತ್ತದೆ. ಹಾಗಾಗಿ ಮಲಗುವ ಕೋಣೆಗೆ ಹ್ಯುಮಿಡಿಫೈರ್ ಆನ್ ಮಾಡಿಟ್ಟು ಕೆಲ ಸಮಯದ ನಂತರ ಅಲ್ಲಿ ಹೋಗಿ ಮಲಗಿದರೆ ಕೆಮ್ಮಿಲ್ಲದ ಒಳ್ಳೆಯ ನಿದ್ದೆ ಮಾಡಬಹುದು.
  • ಸೂಪ್, ಟೀ: ಬಿಸಿಯಾದ ಪದಾರ್ಥಗಳನ್ನು ಸೇವಿಸಿ, ಕಾಫಿ, ಟೀ, ಲೆಮನ್ ಟೀ, ಸೂಪ್, ಬಿಸಿನೀರು ಯಾವುದಾದರೂ. ಇದು ಗಂಟಲು ಯಾವಾಗಲೂ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.
  • ಇವುಗಳನ್ನು ನಿಲ್ಲಿಸಿ: ಸಿಗರೇಟ್ ಸೇವನೆ, ಹೆಚ್ಚು ಪರ್ಫ್ಯೂಮ್ ಹಾಕುವುದು, ಪ್ರಾಣಿಗಳ ಕೂದಲು ಹೀಗೆ ನಿಮಗೆ ಯಾವುದರಿಂದ ಅಲರ್ಜಿ ಆಗುತ್ತದೋ ಅಥವಾ ಆಕ್ಷಿ ಬರುತ್ತದೋ ಅದನ್ನು ನಿಲ್ಲಿಸಿ.
  • ಜೇನುತುಪ್ಪ: ಜೇನುತುಪ್ಪದಲ್ಲಿರುವ ಗುಣಗಳು ಗಂಟಲಿನಲ್ಲಿರುವ ಕಿರಿಕಿರಿ ತಪ್ಪಿಸುತ್ತದೆ. ಕಫ ಇದ್ದರೆ ಅದನ್ನು ಕರಗಿಸುತ್ತದೆ. ಒಂದು ಕಪ್ ಬಿಸಿನೀರಿಗೆ ಒಂದು ಸ್ಪೂನ್ ಜೇನುತುಪ್ಪ ಸ್ವಲ್ಪ ನಿಂಬೆ ರಸ ಬೆರೆಸಿ ಕುಡಿಯಿರಿ.
  • ಉಪ್ಪು ನೀರು ಮುಕ್ಕಳಿಸಿ: ಇದು ತುಂಬಾನೇ ಎಫೆಕ್ಟೀವ್ ವೇ. ತಕ್ಷಣದಕ್ಕೆ ರಿಸಲ್ಟ್ ನೀಡುವ ಮನೆಮದ್ದು. ಪ್ರತಿ ಬಾರಿ ಬಾಯಿಗೆ ಉಪ್ಪುನೀರು ಹಾಕಿದಾಗ ಮೂವತ್ತು ಸೆಕೆಂಡ್ ಹಾಗೇ ಇರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss