Tuesday, August 16, 2022

Latest Posts

ಒತ್ತಡದ ಜೀವನಕ್ಕೆ Relaxation ನೀಡುವ ಆಪ್‌ಗಳ ಲಿಸ್ಟ್ ಇಲ್ಲಿದೆ.. ಯಾವುದು ಅಂತೀರಾ? ಇದನ್ನು ಓದಿ

ಈಗಿನ ಕಾಲದಲ್ಲಿ ಒತ್ತಡ ಎಲ್ಲರನ್ನೂ ಕಾಡುವ ಬಹುದೊಡ್ಡ ರೋಗ. ಒತ್ತಡದಿಂದ ಯಾವೆಲ್ಲ ಕಾಯಿಲೆಗಳನ್ನು ನಾವು ಅನುಭವಿಸುತ್ತಿದ್ದೇವೆ. ಮೊಬೈಲ್ ಹೆಚ್ಚು ಬಳಸುವುದರಿಂದ ಸ್ಟ್ರೆಸ್ ಹೆಚ್ಚುತ್ತದೆ ಎನ್ನುತ್ತಾರೆ. ಆದರೆ ಮೊಬೈಲ್‌ನಲ್ಲಿ ಸಿಗುವ ಅಪ್ಲಿಕೇಶನ್‌ಗಳಿಂದ ನಮ್ಮ ಒತ್ತಡದ ಲೆವೆಲ್ ಕಡಿಮೆ ಆಗಲಿದೆ. ಹಾಗಾದರೆ ಇದು ಯಾವ ಆಪ್ ಎನ್ನುತ್ತಾರೆ. ಜೀವನದ ನಿಮ್ಮ ಒತ್ತಡ ಕಡಿತಗೊಳ್ಳಿಸಲು ಇಲ್ಲಿದೆ ಕೆಲ ಆಪ್‌ಗಳ ಲಿಸ್ಟ್..

  • ಹೆಡ್‌ಸ್ಪೇಸ್: ಹೆಸರೇ ಹೇಳುವಂತೆ ನಮ್ಮ ಹೆಡ್‌ನಲ್ಲಿ ಸ್ಪೇಸ್ ನೀಡುವುದು ಅತ್ಯವಶ್ಯ, ಈ ಆಪ್ ಅದಕ್ಕೆ ಸಹಕಾರಿ. ಇದನ್ನು ಬಳಸಿ ನೀವು ನಿಗದಿತ ಸಮಯಕ್ಕೆ ಧ್ಯಾನ ಮಾಡಬಹುದು. ಹೇಗೆ ಧ್ಯಾನ ಮಾಡಬೇಕು ಎಂಬುದನ್ನೂ ಆಪ್ ಹೇಳಿಕೊಡಲಿದೆ. ಇನ್ನು ನಿದ್ದೆ ಬಾರದಿದ್ದರೆ ಕೂಡ ಈ ಅಪ್ಲಿಕೇಶನ್ ಬಳಸಬಹುದು.
  • ರೂಟಡ್: ನಿಮಗೆ ಎಲ್ಲದಕ್ಕೂ ಗಾಬರಿಯಾಗುವ ಭಾವನೆ ಇದ್ದರೆ, ಆನಕ್ಸೈಟಿ ಇದ್ದರೆ ಈ ಆಪ್ ಡೌನ್ಲೋಡ್ ಮಾಡಿ. ಇದರಲ್ಲಿ ನೀವು ಎಷ್ಟು ಬಾರಿ ಪ್ಯಾನಿಕ್ ಆಗುತ್ತೀರಿ ಎಂದೂ ತೋರಿಸುತ್ತದೆ. ಇನ್ನು ನಿಮಗೇನಾದರೂ ತೊಂದರೆಯಾದರೆ ಎಮರ್ಜೆನ್ಸಿ ನಂಬರ್ ಕೂಡ ಇದರಲ್ಲಿ ಹಾಕಬಹುದು.
  • ಆಕ್ಯುಪ್ರೆಶರ್:ಹೀಲ್ ಯುವರ್‌ಸೆಲ್ಫ್ : ಕೈ ಕಾಲಿನಲ್ಲಿರುವ ಪ್ರೆಶರ್ ಪಾಯಿಂಟ್‌ಗಳ ಮೂಲಕ ನೋವುಗಳನ್ನು ನಿಯಂತ್ರಿಸುವ ಈ ಆಕ್ಯುಪ್ರೆಶರ್ ವಿಧಾನದ ಬಗ್ಗೆ ಈ ಆಪ್‌ನಲ್ಲಿ ಮಾಹಿತಿ ಇದೆ. ತಲೆ ನೋವು ಬಂದಾಗ ಏನು ಮಾಡಬೇಕು,ಅಜೀರ್ಣಕ್ಕೆ ಏನು ಮಾಡಬೇಕು. ಹೀಗೆ ಎಲ್ಲದಕ್ಕೂ ಇಲ್ಲಿ ಉತ್ತರವಿದೆ.
  • ಸ್ಲೀಪ್ ಟೈಮ್: ನಮ್ಮ ಮಾನಸಿಕ ಜೀವನದ ಹಿಂದೆ ನಿದ್ದೆಯ ಕೈವಾಡವೂ ಇದ್ದೇ ಇದೆ.ನೀವು ಎಷ್ಟು ಗಂಟೆ ನಿದ್ದೆ ಮಾಡಿದ್ದೀರಿ. ಅದರಲ್ಲಿ ಎಷ್ಟು ಹೊತ್ತು ಡೀಪ್ ಸ್ಲೀಪ್ ಎಷ್ಟು ಹೊತ್ತು ನಾರ್ಮಲ್ ಸ್ಲೀಪ್ ಎಂದು ತೋರಿಸುತ್ತದೆ, ಇದನ್ನು ಪರಿಗಣಿಸಿ ಮುಂದಿನ ಹೆಜ್ಜೆಗಳನ್ನು ನಾವು ಇಡಬಹುದು.
  • ಕಾಮ್: ನಿದ್ದೆ,ಧ್ಯಾನ, ರಿಲ್ಯಾಕ್ಸೇಶನ್ ಎಲ್ಲದಕ್ಕೂ ಇದೊಂದು ಆಪ್ ಇದ್ದರೆ ಸಾಕು.ನಿಮಗೆ ಯಾವ ರೀತಿಯ ಶಬ್ದ ರಿಲ್ಯಾಕ್ಸಿಂಗ್ ಎನಿಸುತ್ತದೆ ಅದನ್ನು ಇಲ್ಲಿ ಸೆಲೆಕ್ಟ್ ಮಾಡಬಹುದು. ಅಂದರೆ ಮಳೆಯ ಶಬ್ದ,ಕೊಳಲು, ಸಮುದ್ರದ ಅಲೆಯ ಶಬ್ದ ಹೀಗೆ ನಮ್ಮಿಷ್ಟದ ಶಬ್ದಗಳನ್ನು ಕೇಳುತ್ತಾ ರಿಲ್ಯಾಕ್ಸ್ ಆಗಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss