Monday, July 4, 2022

Latest Posts

ಒತ್ತಾಯಪೂರ್ವಕ ಬಂದ್ ಮಾಡಿಸಿದ್ರೆ ಕ್ರಮ: ಗೃಹ ಸಚಿವ ಬೊಮ್ಮಾಯಿ

ಹೊಸದಿಗಂತ ವರದಿ, ಕಾರವಾರ

ಕನ್ನಡಪರ ಸಂಘಟನೆಗಳು ಒತ್ತಾಯ ಪೂರ್ವಕ ಬಂದ್ ಮಾಡಿಸಲು ಹೊರಟರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಬಲವಂತದ‌ ಬಂದ್ ವಿರುದ್ಧ ಕ್ರಮ‌ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ ಇದೆ‌. ಬಂದ್ ಮಾಡಿ ಜನಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಈಗಲೂ ಕೂಡ ಬಂದ್ ವಾಪಸ್​ ಪಡೆಯಲು ಮನವಿ ಮಾಡುವುದಾಗಿ
ತಿಳಿಸಿದರು.

ಮರಾಠ ಅಭಿವೃದ್ಧಿ ‌ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಾಳೆ‌ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಬಂದ್ ಮಾಡಿ ಜನಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಇದರಿಂದ ವ್ಯಾಪಾರ-ವಹಿವಾಟು, ಅನಾರೋಗ್ಯ ಪೀಡಿತರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈಗಲೂ ಕೂಡ ಬಂದ್ ವಾಪಸ್​ ಪಡೆಯಲು ಮನವಿ ಮಾಡುತ್ತೇನೆ ಎಂದರು.ಪ್ರತಿಭಟನೆ ಮಾಡಲು ಹಲವು ರೀತಿಯಲ್ಲಿ ಅವಕಾಶಗಳಿವೆ. ಬಂದ್ ವೇಳೆ ಸರ್ಕಾರಿ ಕಚೇರಿ, ಬಸ್ ಓಡಾಟ, ಎಂದಿನಂತೆ ಇರುತ್ತದೆ. ಹಾಗಾಗಿ ಒತ್ತಾಯದಿಂದ ಬಂದ್ ಮಾಡಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ವರ್ಷಾಚರಣೆ ಸಲುವಾಗಿ ಈಗಾಗಲೇ ಹಲವು ಸಲಹೆ ಸೂಚನೆಗಳು ಬಂದಿವೆ. ಮುಖ್ಯಮಂತ್ರಿಗಳು ಎರಡು ದಿನದಲ್ಲಿ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​​ ಅಸಮಧಾನ ಹೊರ ಹಾಕುತ್ತಿರುವ ಬಗ್ಗೆ ಕೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss