Monday, August 8, 2022

Latest Posts

ಒತ್ತುವರಿ ತೆರವುಗೊಳಿಸಿ 1 ಕೋ. ರೂ. ಮೌಲ್ಯದ ನಿವೇಶನ ವಶಕ್ಕೆ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು

ಹೊಸ ದಿಗಂತ ವರದಿ, ಮೈಸೂರು:

ವ್ಯಕ್ತಿಯೊಬ್ಬ ಅಕ್ರಮವಾಗಿ ಮಾಡಿಕೊಂಡಿದ್ದ ಒತ್ತುವರಿಯನ್ನು ಮಂಗಳವಾರ ಕಾರ್ಯಚರಣೆ ನಡೆಸುವ ಮೂಲಕ ತೆರವುಗೊಳಿಸಿದ ಮೈಸೂರು ನಗರಾಭಿವೃದ್ಧಿಪ್ರಾಧಿಕಾರದ ಅಧಿಕಾರಿಗಳು ಒಂದು ಕೋಟಿ ರೂ ಮೌಲ್ಯದ ನಿವೇಶವನ್ನು ವಶಕ್ಕೆ ತೆಗೆದುಕೊಂಡರು.
ಮೈಸೂರು ನಗರದ ನಾರ್ತ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ ಹಳೇ ಬಡಾವಣೆ ಇಲ್ಲಿ ನಿ.ಸಂಖ್ಯೆ-೫೩೭/ಕೆ ಮತ್ತು ೫೩೭/ಎಲ್ ಅಳತೆ 30×40 ಅಡಿ ಪ್ರಾಧಿಕಾರಕ್ಕೆ ಸೇರಿದ್ದು, ಸದರಿ ನಿವೇಶನಗಳಿಗೆ ಮೋಸಿನ್‌ತಾಜ್ ಕೋಂ ಅಹಮದ್ ಪಾಷಾ ಎಂಬವರು, ನಕಲಿ ದಾಖಲೆ ಸೃಷ್ಠಿಸಿಕೊಂಡು, ಮೈಸೂರು ಮಹಾನಗರಪಾಲಿಕೆಯಲ್ಲಿ ಖಾತಾ ಮಾಡಿಸಿಕೊಂಡಿದ್ದಲ್ಲದೇ, ನಿವೇಶನದ ಸುತ್ತಾ ಗೋಡೆ ನಿರ್ಮಿಸಿಕೊಂಡಿದ್ದರು. ಮುಡಾಗೆ ಸೇರಿದ ಈ ಆಸ್ತಿಯನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಸದರಿ ಅನಧಿಕೃತ ಒತ್ತುವರಿಯನ್ನು ಮುಡಾ ಆಯುಕ್ತರ ನಿರ್ದೇಶನದ ಮೇರೆಗೆ ಇಂದು ನರಸಿಂಹರಾಜ ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿಗಳ ಭದ್ರತೆಯೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಚರಣೆ ನಡೆಸಿ, ತೆರವುಗೊಳಿಸಿದರು.
ಈ ಸಂದರ್ಭ ಮುಡಾದ ವಲಯ ಅಧಿಕಾರಿಗಳಾದ ಜಿ.ಮೋಹನ್, ಹೆಚ್.ಎನ್.ರವೀಂದ್ರಕುಮಾರ್, ಸರ್ವೇಯರ್‌ಗಳು ಹಾಗೂ ಸಂಬoಧಪಟ್ಟ ಸಹಾಯಕ/ಕಿರಿಯ ಅಭಿಯಂತರುಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss