Sunday, March 7, 2021

Latest Posts

ಒಬ್ಬೊಬ್ಬರ ದೇಹ ಒಂದೊಂದು ಕಡೆ ಬಿದ್ದಿತ್ತು, ಕತ್ತಲಲ್ಲಿ ಕಾರ್ಯಾಚರಣೆಯೂ ಕಷ್ಟವಾಗಿತ್ತು!!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಲೆನಾಡಿಗರಿಗೆ ಕಳೆದ ರಾತ್ರಿ ಭಯಾನಕ ಅನುಭವ ಆಗಿದ್ದು ನಿಜ. ಒಂದು ಕ್ಷಣದಲ್ಲಿ ದೊಡ್ಡ ಶಬ್ದ,ಬೆಳಕಿಗೆ ಭೂಕಂಪ ಎಂದು ಮನೆಯಿಂದ ಎಲ್ಲರೂ ಹೊರಗೆ ಬಂದಿದ್ದು, ಕಣ್ಮುಚ್ಚಿ ಕಣ್ತೆಗೆಯುವುದರ ಒಳಗೆ 15 ಮೃತದೇಹಗಳು ಛಿದ್ರವಾಗಿವೆ.
ಒಬ್ಬೊಬ್ಬರ ದೇಹ ಒಂದೊಂದು ಕಡೆ ಗುರುತು ಸಿಗದ ರೀತಿಯಲ್ಲಿ ಬಿದ್ದಿತ್ತು. ಹುಣಸೋಡು ಬಳಿಯ ರೈಲ್ವೆ ಕ್ವಾರಿ ಬಳಿ ಸ್ಫೋಟ ಸಂಭವಿಸಿದ್ದು, ಸುಮಾರು ದೂರದವರೆಗೂ ಶಬ್ದ,ಬೆಳಕು ಕಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ, ಆಂಬುಲೆನ್ಸ್ ಧಾವಿಸಿದ್ದು, ಪೊಲೀಸರು ಮೃತದೇಹ ಶೋಧಕಾರ್ಯದಲ್ಲಿ ತೊಡಗಿದ್ದರು. ರಕ್ತದಲ್ಲಿ ಸಿಕ್ಕಿದ್ದ ನಾಲ್ಕು ಮೃತದೇಹಗಳನ್ನು ಮೆಗ್ಗಾನ್‌ಗೆ ಸಾಗಿಸಲಾಯಿತು. ಇನ್ನುಳಿದವರ ಮೃತದೇಹಕ್ಕಾಗಿ ರಾತ್ರಿಯಿಡೀ ಶೋಧಕಾರ್ಯ ಮುಂದುವರಿದಿತ್ತು.
ಇನ್ನೂ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಸಾಧ್ಯತೆಯಿದ್ದು,ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇನ್ನು ಕಗ್ಗತ್ತಲ ಕಾರಣದಿಂದ ಮೃತದೇಹ ಪತ್ತೆಯೂ ಕಷ್ಟಕರವಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss