ಒಮನ್: ಒಮನ್ ಅರಸ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಶುಕ್ರವಾರ ನಿಧನರಾದರು.
ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ ಖಾಬೂಸ್ ಡಿಸೆಂಬರ್ ನಲ್ಲಿ ಚಿಕಿತ್ಸೆಗಾಗಿ ಬೆಲ್ಜಿಯಂ ಗೆ ತೆರಳಿದ್ದರು. ಒಮನ್ ಸರ್ಕಾರ ಅವರ ಸಾವಿನ ಕಾರಣವನ್ನು ಬಹಿರಂಗಪಡಿಸಿಲ್ಲ.
ಮಧ್ಯಪ್ರಾಚ್ಯದಲ್ಲಿನ ಘರ್ಷಣೆಗಳಿಂದ ಒಮನ್ ದೇಶದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದ್ದ ಅರಸ ಸುಲ್ತಾನ್ ಖಾಬೂಸ್ ಬಿನ್. ಈ ದೀಮಂತ ನಾಯಕನಂತವರನ್ನು ಆರಿಸಲು ಒಮನ್ ನ ಉನ್ನತ ಸೇನಾ ಸಮಿತಿ ಸಕ್ರಿಯವಾಗಿ ಕಾರ್ಯನಿರವಹಿಸುತ್ತಿದೆ.
ಸರಿ ಸುಮಾರು 5 ದಶಕಗಳ ಕಾಲ ಆಡಳಿತ ನಡೆಸಿದವರು ಖಾಬೂಸ್. ಇವರ ನಿಧನದಿಂದ ದೇಶಕ್ಕೆ 3ದಿನಗಳ ಕಾಲ ಶೋಕಾಚರಣೆ ನಿಗದಿಯಾಗಿದೆ. ದೇಶದಲ್ಲಿ 40 ದಿನಗಳ ರಾಷ್ಟ್ರ ದ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು.
ಒಮನ್ ಅರಸ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಅವರ ನಿಧನಕ್ಕೆ ಭಾರತದ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದ್ದಾರೆ.