ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಮನ್ ನಲ್ಲಿ ಹೊಸ ಅರಸನ ಆಳ್ವಿಕೆ

ಮಸ್ಕಟ್: ಸುಲ್ತಾನ್ ಖಾಬೂಸ್ ಬಿನ್ ರ ನಿಧನದ ನಂತರ ದೇಶದ ಒಮನ್ ಆಡಳಿತಕ್ಕೆ ಹೊಸ ದೊರೆಯ ಹೆಸರು ಹೊರಬಂದಿದೆ.

ಪರಂಪರೆ ಮತ್ತು ಸಂಸ್ಕೃತಿ ಸಚಿವ ಹೈಥಮ್ ಬಿನ್ ಅಲ್ ಸಾಯಿದ್ ಒಮನ್ ದೇಶದ ಹೊಸ ಅರಸನೆಂದು ವರದಿಯಾಗಿದೆ. ಸುಲ್ತಾನ್ ಖಾಬೂಸ್ ಬಿನ್ ನಿಧನದ ನಂತರ ಸಾರ್ವಜನಿಕ ದರ್ಶನಕ್ಕೆ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೊಸ ಅರಸನ ಹೆಸರು ಘೊಷಿಸಲಾಯಿತು.

ಸುಲ್ತಾನ ಖಾಬೂಸ್ ಬಿನ್ ಗೆ ಮಕ್ಕಳಿಲ್ಲದ ಕಾರಣ ದೇಶದ ಮುಂದಿನ ಉತ್ತರಾಧಿಕಾರಿಯ ಆಯ್ಕೆಯಲ್ಲಿ ಒಮನ್ ನ ಕುಟುಂಬ ಮಂಡಳಿ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗುವುದು. ಕುಟುಂಬ ಮಂಡಳಿ ಸೋತರೆ ನಂತರ ಸುಲ್ತಾನ್ ಖಾಬೂಸ್ ಬಿನ್ ಅವರ ಪತ್ರವನ್ನು ಪರಿಶೀಲಿಸಿ ಉತ್ತರಾಧಿಕಾರಿಯ ಆಯ್ಕೆಯನ್ನು ಮಾಡಬೇಕು ಎಂದು ಒಮನ್ ಉತ್ತರಾಧೀಕಾರಿ ಕಾನೂನು ಹೇಳುತ್ತದೆ.

ಒಮನ್ ಮಾಧ್ಯಮ ಹೆಚ್ಚು ಸಮಯ ವ್ಯರ್ಥ ಮಾಡದೆ ಸುಲ್ತಾನ ಖಾಬೂಸ್ ಬಿನ್ ಅವರ ಪತ್ರವನ್ನು ಓದಿ ಒಮನ್ ನ ಪರಂಪರೆ ಮತ್ತು ಸಂಸ್ಕೃತಿ ಸಚಿವ ಹೈಥಮ್ ಬಿನ್ ಅಲ್ ಸಾಯಿದ್ ಮುಂದಿನ ಆಡಳಿತಾಧಿಕಾರಿ ಎಂದು ಘೋಷಿಸಿತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss