Thursday, January 28, 2021

Latest Posts

ಒಲಿಂಪಿಕ್‌ನಲ್ಲಿ 10 ಪದಕಗಳ ಗೆದ್ದ ಗಟ್ಟಿಗಿತ್ತಿಗೆ ಈಗ 100 ವರ್ಷ

ಹೊಸದಿಗಂತ ಆನ್ ಲೈನ್ ಡೆಸ್ಕ್

ಒಲಿಂಪಿಕ್‌ನಲ್ಲಿ ಬಂಗಾರದ ಪದಕ ಗೆದ್ದಿರುವ ಹಂಗೆರಿಯ ಆಗ್ನೆಸ್ ಕೆಲೆಟಿ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ಜಿಮ್ನಾಸ್ಟಿಕ್‌ನಲ್ಲಿ ಕೆಲೆಟಿ ಒಟ್ಟು 10 ಪದಕಗಳ ಗೆದ್ದ ಗಟ್ಟಿಗಿತ್ತಿ. ಇದರಲ್ಲಿ ಐದು ಚಿನ್ನದ ಪದಕಗಳೂ ಸೇರಿವೆ. ತನ್ನ 100ನೇ ವರ್ಷದ ಹುಟ್ಟುಹಬ್ಬವನ್ನು ಕೆಲೆಟಿ ತನ್ನ ತವರೂರಾದ ಬುಡಾಪೆಸ್ಟ್‌ನಲ್ಲಿ ಶನಿವಾರ ಆಚರಿಸಿಕೊಂಡಿದ್ದಾರೆ. ಕೆಲೆಟಿ ತನ್ನ ಬದುಕಿನ ಸಾಧನೆಗಳು, ಸಾಹಸ, ದುಃಖಕರ ಸಂಗತಿ, ಪರಿಶ್ರಮ ಇವನ್ನೆಲ್ಲ ಸಣ್ಣದಾಗಿ ವಿವರಿಸಿದರು.
ಹುಟ್ಟುಹಬ್ಬವನ್ನು ಆಚರಿಸುತ್ತಾ ಕೆಲೆಟಿ, ನನಗೀಗ 60 ವರ್ಷ ವಯಸ್ಸಾದಂತೆಯೇ ಭಾಸವಾಗುತ್ತಿದೆ ಎಂದಿದ್ದಾರೆ. ದ ಕ್ವೀನ್ ಆಫ್ ಜಿಮ್ನಾಸ್ಟಿಕ್ ಹೆಸರು ಇರುವ ಕೆಲೆಟಿಯ ಜೀವನಾಧರಿತ ಪುಸ್ತಕವೂ ಇದೆ. 9 ಜನವರಿ 1921ರಂದು ಜನಿಸಿರುವ ಆಗ್ನೆಸ್ ಕೆಲೆಟಿ, ದ್ವಿತೀಯ ಮಹಾಯುದ್ಧದಿಂದಾಗಿ 1940 ಮತ್ತು 1944 ರ ಒಲಿಂಪಿಕ್ ರದ್ದಾದಾಗ ಕೆಲೆಟಿ ವೃತ್ತಿ ಬದುಕಿಗೆ ತೊಂದರೆಯಾಗಿತ್ತು. ಯಹೂದಿ ಮನೆತನದವರಾಗಿದ್ದರಿಂದ ಕೆಲೆಟಿಯನ್ನು ತಂಡದಿಂದ ಹೊರ ಹಾಕಲಾಯ್ತು. ಬಳಿಕ ಕೆಲೆಟಿ ಹಂಗೇರಿಯನ ರಾಷ್ಟ್ರದಲ್ಲಿ ತಲೆ ಮರೆಸಿ ಬದುಕಬೇಕಾದ ಸಂದರ್ಭ ಎದುರಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!