ಬಂದಿಪೋರ (ಜಮ್ಮು ಕಾಶ್ಮೀರ): ಉತ್ತರ ಕಾಶ್ಮೀರದ ಬಂದಿಪೋರ ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಓರ್ವ ಲಕ್ಷರ್ ಇ ತೈಬಾ ದ ಭಯೋತ್ಪಾದಕನ್ನು ಬಂಧಿಸಲಾಗಿದೆ.
ಬಂಧಿತ ಭಯೋತ್ಪಾದಕನು ಶೋಫಿಯನ್ ಜಿಲ್ಲೆಯ ಅವನೀರ ಪ್ರದೇಶದ ನಿವಾಸಿಯಾದ ಸಬ್ಜರ್ ಅಹಮದ್ ಅಲಿಯಾಸ್ ಆತೀಶ್ ಭಾಯ್ ಎಂದು ಗುರುತಿಸಲಾಗಿದೆ.
ಉಗ್ರನಿಂದ 1 9mm ಪಿಸ್ತೂಲ್ ಜೊತೆಗೆ ಪಿಸ್ತೂಲ್ ಮ್ಯಾಗಜೀನ್ ಮತ್ತು 4 ಲೈವ್ ರೌಂಡ್ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉಗ್ರರನು ಇತ್ತೀಚಿಗಷ್ಟೆ ಲಕ್ಷರ್ ಇ ತೈಬಾ ಗೆ ಸೇರಿಕೊಂಡಿದ್ದು, ಹಜಿನ್ ಪ್ರದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸುಪಾರಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲಿಸರು ತನಿಖೆ ನಡೆಸುತ್ತಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.